ಬೆಂಗಳೂರು: ನಕಲಿ ದಾಖಲಾತಿ ನೀಡಿ ವಂಚನೆ, 23 ಶಿಕ್ಷಕ ಅಭ್ಯರ್ಥಿಗಳ ವಿರುದ್ದ ಪ್ರಕರಣ ದಾಖಲು
ನಕಲಿ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ನೀಡಿರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ 23 ಜನರ ವಿದಾನ ಸೌಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Published On :
ಬೆಂಗಳೂರು: ನಕಲಿ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ನೀಡಿ ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ 23 ಜನರ ವಿರುದ್ಧ ವಿದಾನ ಸೌಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಆರ್. ಕೆ. ರಮೇಶ್ ಬಾಬು ಸಲ್ಲಿಸಿದ ದೂರಿನ ಅನುಸಾರ "23 ಅಭ್ಯರ್ಥಿಗಳು ಉದ್ಯೋಗಕ್ಕಾಗಿ ನಕಲಿ ಪ್ರಮಾಣಪತ್ರ ಮತ್ತು ನಕಲಿ ಅಂಕ ಪಟ್ಟಿಗಳನ್ನು ಸಲ್ಲಿಸಿದ್ದಾರೆ"
ಐಪಿಸಿ ಸೆಕ್ಷನ್ 420 (ವಂಚನೆ), 471 (ದಾಖಲಾತಿಗಳು ಅಥವಾ ಎಲೆಕ್ಟ್ರಾನಿಕ್ ದಾಖಲೆಗಳ ನಕಲು), 472 (ನಕಲಿ ಸೀಲ್ ತಯಾರಿಸುವುದು ಅಥವಾ ಹೊಂದುವುದು), 465 ಮತ್ತು 468 (ವಂಚನೆ ಉದ್ದೇಶಕ್ಕಾಗಿ ನಕಲು ಮಾಡುವುದು) ಅಡಿಯಲ್ಲಿ ಕೊಪ್ಪಳದ ಶಿವಬಸಪ್ಪ ಮಸಿಕಿ, ಅಹರನ ಗೌಡ ಮತ್ತು ಪಂಚಕ್ಷರಾಯ, ಬಳ್ಳಾರಿಯ ವಿರೂಪಾಕ್ಷ, ಬೆಳಗಾವಿಯ ಎಸ್ತಾರ್ ಸರೀನಾ ಕುಮಾರಿ, ರಾಯಚೂರುನ ಚೇತನ್ ಪಾಟೀಲ್ ಮತ್ತು ಗುರುರಾಜ್ ಸಿದ್ಧರಾಮನ ಗೊಡಗೇರಿ, ಬಾಗಲಕೋಟೆಯ ಫಿರೋಜ್ ಅಹ್ಮದ್, ಬೀದರ್ ನ ಮಹಾದೇವಿ, ಕಲಬುರ್ಗಿಯ ಮಿಥುನ್ ಮೊದಲಾದವರ ಮೇಲೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾಜ್ಯದಾದ್ಯಂತ 2,160 ಸಹಾಯಕ ಪ್ರಾದ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು 2014 ನಡೆಸಲಾಗಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿ ಅವರು ಆಯ್ಕೆಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Fake Certificatesteachersಶಿಕ್ಷಕರುassistant professorVidhana Soudha policeವಿಧಾನಸೌಧ ಪೊಲೀಸ್ಸಹಾಯಕ ಪ್ರಾದ್ಯಾಪಕರುನಕಲಿ ಪ್ರಮಾಣಪತ್ರಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


