ರಾಜ್ಯ

ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪುಸ್ತಕಗಳಿಗಿಂತ ಸಾಮಾಜಿಕ ತಾಣಗಳತ್ತ ಹೊರಳಿದ್ದಾರೆ: ಸದಾನಂದ ಗೌಡ

ವಿದ್ಯಾರ್ಥಿಗಳ ಕಲಿಕಾ ವಿಧಾನದಲ್ಲಿ ಇಂದು ಬದಲಾವಣೆ ಆಗಿದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ.

ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪುಸ್ತಕಗಳಿಗಿಂತ ಸಾಮಾಜಿಕ ತಾಣಗಳತ್ತ ಹೊರಳಿದ್ದಾರೆ: ಸದಾನಂದ ಗೌಡ
ಬಿಜಿಎಸ್ ಉತ್ಸವ 2017 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ
Published On :
ಬೆಂಗಳೂರು:ವಿದ್ಯಾರ್ಥಿಗಳ ಕಲಿಕಾ ವಿಧಾನದಲ್ಲಿ ಇಂದು ಬದಲಾವಣೆ ಆಗಿದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪುಸ್ತಕಗಳಿಗೆ ಬದಲಾಗಿ ಸಾಮಾಜಿಕ ತಾಣಗಳಿಗೆ ಅವಲಂಬಿತರಾಗಿದ್ದಾರೆ.ಎಂದು ಅವರು ಹೇಳಿದರು. ನಿನ್ನೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ಸ್ಥಾಪಕರ ದಿನಾಚರಣೆ, ಬಿಜಿಎಸ್ ಉತ್ಸವ್ 2017 ಕಾರ್ಯಕ್ರಮದಲ್ಲಿ ಸದಾನಂದ  ಗೌಡ ಭಾಗವಹಿಸಿ ಮಾತನಾಡಿದ್ದಾರೆ. 
"ಇಂದಿನ ವಿದ್ಯಾರ್ಥಿಗಳು ಪುಸ್ತಕಗಳನ್ನು ಹಿಡಿದಿರುವುದಿಲ್ಲ. ಅವರು ಡಿಜಿಟಲ್ ಜಗತ್ತಿಗೆ ಹೊರಳಿದ್ದಾರೆರೆ. ಇದನ್ನು ನಾವು ಗಮನಿಸಬೇಕಿದೆ. ಕಲಿಕೆ ಈಗ ಫೇಸ್ ಬುಕ್ ಹಾಗೂ ಮತ್ತು ಟ್ವಿಟ್ಟರ್ ಗೆ ಸ್ಥಳಾಂತರವಾಗಿದೆ. ಇದು ಒಳ್ಳೆಯ ಬೆಳವಣಿಗೆ ಎಂದೇ ಭಾವಿಸಿದ್ದೇನೆ" ಅವರು ಹೇಳಿದರು. ವಿಶ್ವದ ಟಾಪ್ 100 ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಭಾರತದ ಯಾವ ಒಂದು ವಿಶ್ವವಿದ್ಯಾನಿಲಯದ ಹೆಸರೂ ಇಲ್ಲ. ಗುಣಮಟ್ಟದ ಶಿಕ್ಷಣ, ಅನುಕೂಲಕರ ಕಲಿಕಾ ಪರಿಕರಗಳ ಕೊರತೆ ಮತ್ತು ಶಿಸ್ತಿನ ಅಭಾವದಿಂದಾಗಿ ಈ ಪರಿಸ್ಥಿತಿ ಉಂತಾಗಿದೆ ಎಂದು ಗೌಡರು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಲ್ಲಿ ಒಬ್ಬರಾದ ಗುರುರಾಜ್ ಕೈಲರಗಿ ಭಾಷಣವನ್ನು ಪ್ರಾರಂಭಿಸಿದಾಗ,ಅವರು ತಮ್ಮ ಭಾಷಣವನ್ನು ಆಂಗ್ಲ ಬಾಷೆಗೆ ಅನುವಾದಿಸಿ ವಿದ್ಯಾರ್ಥಿಗಳಿಗೆ ತಿಳಿಸುವಂತೆ ಮನವಿ ಮಾಡಿದರು. ಆಗ ಕೇಂದ್ರ ಸಚಿವರು, ಇವರು ಕನ್ನಡದಲ್ಲಿ ಮಾತ್ರವೇ ಮಾತನಾಡುತ್ತಾರೆ ಹಾಗೆಯೇ ಅಭೂತಪೂರ್ವವಾದ ಚಪ್ಪಾಳೆ ಗಿಟ್ಟಿಸುತ್ತಾರೆ ಎಂಡು ಸ್ಪಷ್ಟನೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.