ರಾಜ್ಯ

ಬೆಂಗಳೂರು: ಕೃಷಿ ಮೇಳದಲ್ಲಿ ಚಿಕ್ಕಬಳ್ಳಾಪುರ ಮಹಿಳೆಗೆ 'ಅತ್ಯುತ್ತಮ ರೈತ ಮಹಿಳೆ' ಪ್ರಶಸ್ತಿ

ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ ಎಂಬುದಕ್ಕೆ ಶಾರದಮ್ಮ ಅವರು ಪ್ರೇರಣೆಯಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಿರುವ ಶಾರದಮ್ಮ ಅವರು, ಈ ವರ್ಷದ ಅತ್ಯುತ್ತಮ ರೈತ ಮಹಿಳೆ...

ಬೆಂಗಳೂರು: ಕೃಷಿ ಮೇಳದಲ್ಲಿ ಚಿಕ್ಕಬಳ್ಳಾಪುರ ಮಹಿಳೆಗೆ 'ಅತ್ಯುತ್ತಮ ರೈತ ಮಹಿಳೆ' ಪ್ರಶಸ್ತಿ
'ಅತ್ಯುತ್ತಮ ರೈತ ಮಹಿಳೆ' ಪ್ರಶಸ್ತಿ ಪಡೆದ ಚಿಕ್ಕಬಳ್ಳಾಪುರ ಮಹಿಳೆ
Published On :
ಬೆಂಗಳೂರು: ಪರಿಶ್ರಮಪಟ್ಟಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ ಎಂಬುದಕ್ಕೆ ಶಾರದಮ್ಮ ಅವರು ಪ್ರೇರಣೆಯಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಿರುವ ಶಾರದಮ್ಮ ಅವರು, ಈ ವರ್ಷದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 
ಚಿಕ್ಕಬಳ್ಳಾಪುರದ 50 ವರ್ಷದ ಮಹಿಳೆ ಶಾರಮ್ಮ ಎಂಬುವವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ನೀಡಿ ಭಾನುವಾರ ಗೌರವಿಸಿದ್ದಾರೆ. ಉತ್ತಮ ರೈತ ಪುರುಷರಲ್ಲಿ ಸಿ. ರಾಧಾಕೃಷ್ಣ, ರಾಜು ಸೇತಪ್ಪ ಬೈರೇಗೌಡ ಅವರಿಗೆ ಉತ್ತಮ ತೋಟಗಾರಿಕೆ ಕೃಷಿಕ ಪ್ರಶಸ್ತಿ, ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ತರಕಾರಿ ಬೆಳೆಗಳ ವಿಭಾಗದ ಮುಖ್ಯಸ್ಥ ಡಾ.ಎ.ಟಿ. ಸದಾಶಿವ ಅವರಿಗೆೇ ಡಾ.ಎಂ.ಹೆಚ್. ಮರಿಗೌಡ ರಾಷ್ಟ್ರೀಯ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಬರಡು ಭೂಮಿಯಾಗಿದ್ದ 5 ಎಕರೆ ಭೂಮಿಯನ್ನು ಶಾರಮ್ಮ ಅವರು ಫಲವತ್ತಾದ ನೆಲವಾಗಿ ಬದಲಾಯಿಸಿತ್ತು. ಇದೀಗ ಆ ಭೂಮಿಯಲ್ಲಿ ಹಲವು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅಲ್ಲದೆ, ಇದೇ ಭೂಮಿಯಲ್ಲಿ ಹಸು, ಕುರಿ ಹಾಗೂ ಹಂದಿಗಳನ್ನು ಸಾಕುತ್ತಿದ್ದಾರೆ. 
ಒಂದು ಕಾಲದಲ್ಲಿ ನೀರಿಗಾಗಿ ನಾವು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದೆವು. ಇದೀಗ ನಮ್ಮ ಭೂಮಿಯಲ್ಲಿ ಕರಿಬೇವು, ಬದನೆಕಾಯಿ, ಮಲ್ಲಿಗೆ ಹಾಗೂ ನೇರಳೆಯನ್ನು ಬೆಳೆಯುತ್ತಿದ್ದೇವೆಂದು ಶಾರದಮ್ಮ ಅವರು ಹೇಳಿದ್ದಾರೆ. 
ಹನಿ ನೀರಾವರಿ ವ್ಯವಸ್ಥೆಯನ್ನು ನಾವು ಅಳವಡಿಸಿಕೊಂಡಿದ್ದೆವು. ವಾಟಲ್ ಬಾಟಲಿಗಳನ್ನು ಬಳಸಿಕೊಂಡು ಬೆಳೆಗಳಿಗೆ ನೀರನ್ನು ಒದಗಿಸಲು ಆರಂಭಿಸಿದ್ದೆವು ಎಂದು ತಿಳಿಸಿದ್ದಾರೆ. 
ಶಾರದಮ್ಮ ಅವರು ಇದೀಗ 4 ಹಸುಗಳು, 15 ಕುರಿಗಳು ಹಾಗೂ 30 ಹಂದಿಗಳನ್ನು ಸಾಕುತ್ತಿದ್ದಾರೆ.  ಗುಡಿಬಾಂಡೆ ತಾಲ್ಲೂಕಿನ ಹಾಲು ಸಹಕಾರ ಸಂಘದ ನಿರ್ದೇಶಕರಾಗಿ ಶಾರದಮ್ಮ ಅವರು ಸೇವೆ ಸಲ್ಲಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.