ಕೆಪಿಎಂಇ ಕಾಯ್ದೆ ವಿವಾದ: ಸಾಮಾಜಿಕ ಜಾಲತಾಣಗಳಲ್ಲಿ ಸಚಿವ ರಮೇಶ್ ಕುಮಾರ್'ಗೆ ಭಾರೀ ಬೆಂಬಲ
ಕೆಪಿಎಂಇ ಕಾಯ್ದೆ ವಿವಾದ ಕುರಿತಂತೆ ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ರಾಜ್ಯ ಸರ್ಕಾರದ ನಡುವೆ ಜಟಾಪಟಿ ಮುಂದುವರೆದಿರುವ ಬೆನ್ನಲ್ಲೇ ಸಾಮಾಜಿಕ ಜಾಲಾತಾಣಗಳಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ಭಾರೀ ಬೆಂಬಲಗಳು ವ್ಯಕ್ತವಾಗತೊಡಗಿವೆ...

Published On :
ಬೆಂಗಳೂರು: ಕೆಪಿಎಂಇ ಕಾಯ್ದೆ ವಿವಾದ ಕುರಿತಂತೆ ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ರಾಜ್ಯ ಸರ್ಕಾರದ ನಡುವೆ ಜಟಾಪಟಿ ಮುಂದುವರೆದಿರುವ ಬೆನ್ನಲ್ಲೇ ಸಾಮಾಜಿಕ ಜಾಲಾತಾಣಗಳಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ಭಾರೀ ಬೆಂಬಲಗಳು ವ್ಯಕ್ತವಾಗತೊಡಗಿವೆ.
ಕೆಪಿಎಂಇ ಕಾಯ್ದೆ ಕುರಿತಂತೆ ಸಾಮಾಜಿಕ ಜಾಲತಾಣಗಳಾದ ಫೇಸ್'ಬುಕ್, ಟ್ವಿಟರ್ ನಲ್ಲಿ ಹ್ಯಾಷ್ ಟ್ಯಾಗ್ ಗಳ ಮೂಲಕ 'ವಿ ಸಪೋರ್ಟ್ ರಮೇಶ್ ಕುಮಾರ್' ಎಂದು ಜನರು ಟ್ವೀಟ್ ಮಾಡುವ ಮುಖಾಂತರ ಜನರು ಸಚಿವರಿಗೆ ಬೆಂಬಲಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಚಿಕಿತ್ಸಾ ಪ್ರಕ್ರಿಯೆಗಳಿಗೆ ಸರ್ಕಾರವೇ ಶುಲ್ಕವನ್ನು ನಿಗದಿ ಮಾಡುವುದರಿಂದ ಆಸ್ಪತ್ರೆಗಳಲ್ಲಿರುವ ಪಾರದರ್ಶಕತೆ ಕುರಿತು ಜನರಿಗೆ ಮಾಹಿತಿ ತಿಳಿಯುತ್ತದೆ. ಇದಕ್ಕೆ ನೀವೇಕೆ ಪ್ರತಿಭಟಿಸುತ್ತಿದ್ದೀರಿ ಎಂದು ವಿದ್ಯಾ ಸಿಂಗ್ ಎಂಬುವವರು ಪ್ರಶ್ನಿಸಿದ್ದಾರೆ.
ಕೆಪಿಎಂಇ ಕಾಯ್ದೆಯಿಂದ ಬಡವರಿಗೆ ಸಹಾಯವಾಗಲಿದ್ದು, ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು. ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು ಸರ್ಕಾರ ತೆಗೆದುಕೊಳ್ಳುತ್ತಿರುವ ಈ ನಿರ್ಧಾರ ಉತ್ತಮವಾಗಿದೆ ಎಂದು ಜೀವಾ ಮಡಿಕೇರಿ ಎಂಬುವವರು ಹೇಳಿದ್ದಾರೆ.
ಪ್ರಸ್ತುತ ಸರ್ಕಾರ ಜಾರಿಗೆ ತರುತ್ತಿರುವ ಕಾಯ್ದೆ ಬಡವರ ಪರವಾಗಿದೆ. ಖಾಸಗಿ ವಲಯಗಳು ಆಸ್ಪತ್ರೆಗಳನ್ನು ವ್ಯವಹಾರ ಮಾಡಿಕೊಂಡು ಬಿಟ್ಟಿವೆ. ಇದಕ್ಕೆ ಅಂತ್ಯ ಹಾಡುವುದು ಬೇಡವೇ? ಖಾಸಗಿ ವಲಯಗಳು ನಡೆಸುತ್ತಿರುವ ದೌರ್ಜನ್ಯಗಳಿಗೆ ಸಾಮಾನ್ಯ ಜನರು ಬಲಿಪಶುಗಳಾಗಬೇಕೆ?: ಕೆಪಿಎಂಪಿ ಕಾಯ್ದೆಗೆ ನಮ್ಮ ಬೆಂಬಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸಾಮಾಜಿಕ ಜಾಲತಾಣsupportಬೆಂಬಲSocial Mediaಖಾಸಗಿ ಆಸ್ಪತ್ರೆRamesh Kumarರಮೇಶ್ ಕುಮಾರ್private hospitalsKPME Actಕೆಪಿಎಂಇ ಕಾಯ್ದೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


