ರಾಜ್ಯ

ಸ್ಲೀಪರ್ ಬಸ್ ಗಳಲ್ಲಿ ಪರದೆ ತೆಗೆದು ಸಿಸಿಟಿವಿ ಅಳವಡಿಸಿ: ಜಯಮಾಲ ಮನವಿ ತಿರಸ್ಕರಿಸಿದ ಸಚಿವ

ಸರ್ಕಾರಿ ಮತ್ತು ಖಾಸಗಿ ಬಸ್ ಗಳ ಸ್ಲೀಪರ್ ಕೋಚ್ ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಬಸ್ ಗಳಲ್ಲಿ ಪರದೆಗಳನ್ನು ತೆಗೆದು ಸಿಸಿಟಿವಿಗಳನ್ನು ಅಳವಡಿಸುವಂತೆ ವಿಧಾನ ಪರಿಷತ್ ಸದಸ್ಯೆ ಜಯಮಾಲ ಅವರು ಮಾಡಿದ ಮನವಿಯನ್ನು ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ...

ಸ್ಲೀಪರ್ ಬಸ್ ಗಳಲ್ಲಿ ಪರದೆ ತೆಗೆದು ಸಿಸಿಟಿವಿ ಅಳವಡಿಸಿ: ಜಯಮಾಲ ಮನವಿ ತಿರಸ್ಕರಿಸಿದ ಸಚಿವ
ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ
Published On :
ಬೆಳಗಾವಿ: ಸರ್ಕಾರಿ ಮತ್ತು ಖಾಸಗಿ ಬಸ್ ಗಳ ಸ್ಲೀಪರ್ ಕೋಚ್ ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಬಸ್ ಗಳಲ್ಲಿ ಪರದೆಗಳನ್ನು ತೆಗೆದು ಸಿಸಿಟಿವಿಗಳನ್ನು ಅಳವಡಿಸುವಂತೆ ವಿಧಾನ ಪರಿಷತ್ ಸದಸ್ಯೆ ಜಯಮಾಲ ಅವರು ಮಾಡಿದ ಮನವಿಯನ್ನು ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಅವರು ಶುಕ್ರವಾರ ತಿರಸ್ಕರಿಸಿದ್ದಾರೆ. 
ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯೆ ಜಯಮಾಲ ಮಾತನಾಡಿ, ಸರ್ಕಾರಿ ಮತ್ತು ಖಾಸಗಿ ಸ್ಲೀಪರ್ ಬಸ್ ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಹೇಳಿದರು. 
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಅವರು, ಅನೈತಿಕ ಚಟುವಟಿಗಳು ನಡೆದಿರುವ ಪ್ರಕರಣಗಳ ವರದಿಯಾಗಿಲ್ಲ. ಒಂದು ವೇಳೆ ಪ್ರಕರಣಗಳು ನಡೆದಿರುವ ಬಗ್ಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. 
ತಕ್ಷಣ ಜಯಮಾಲ ಅವರು, ಸರ್ಕಾರಕ್ಕೆ ಈ ಬಗ್ಗೆ ವರದಿ ನೀಡಲಾಗಿದೆ. ಸಚಿವರು ಅದನ್ನು ಓದಬೇಕು ಎಂದು ತಿಳಿಸಿದರು. ಜಯಮಾಲ ಅವರಿಗೆ ಮೋಟಮ್ಮ ಅವರೂ ಕೂಡ ಬೆಂಬಲ ಸೂಚಿಸಿ ತಮ್ಮ ಪಕ್ಷದ ನಾಯಕರ ಮೇಲೆಯೇ ವಾಗ್ದಾಳಿ ನಡೆಸಿದರು. 
ನಂತರ ಉತ್ತರಿಸಿದ ಸಚಿವರು, ಮಹಿಳೆಯರ ಸುರಕ್ಷತೆ ಹಿತದೃಷ್ಟಿಯಿಂದ ಪರದೆಯನ್ನು ಹಾಕಲಾಗಿದೆ. ಮಹಿಳೆಯರಿಗೆ ಸಿಂಗಲ್ ಸೀಟ್ ನೀಡಲು ಆದ್ಯತೆ ನೀಡಲಾಗುತ್ತದೆ. ಒಂದು ವೇಳೆ ಡಬ್ಬಲ್ ಸೀಟ್ ಕಾಯ್ದಿರಿಸಿದರೆ, ಮತ್ತೊಂದು ಸೀಟು ಪುರುಷರು ಕಾಯ್ದಿರಿಸದಂತೆ ಬ್ಲಾಕ್ ಮಾಡಲಾಗುತ್ತದೆ. ಕೆಲವೊಮ್ಮೆ ದಂಪತಿಗಳಿರುವುದರಿಂದ ಹಾಗೂ ಮಹಿಳೆ ರಕ್ಷಣೆಗಾಗಿ ಪರದೆ ಅಗತ್ಯವಿದೆ. ಪರದೆಗಳನ್ನು ತಗೆದು ಹಾಕಿದಲ್ಲಿ ಸಾರ್ವಜನಿಕ ಪ್ರಯಾಣಿಕರ ಖಾಸಗಿತನಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ಪರದೆ ತೆಗೆದು ಸಿಸಿಟಿವಿ ಅಳವಡಿಸುವುದು ಸೂಕ್ತವಲ್ಲ ಎಂದು ತಿಳಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.