ಬೆಂಗಳೂರು: ಕಾರಿನಲ್ಲಿ ಬಂದು ಮನೆ ಲೂಟಿ ಮಾಡಿ ಪರಾರಿಯಾಗುತ್ತಿದ್ದ ಚೋರ ಅಂದರ್
ಪೂರ್ವ ವಿಭಾಗದ ಪೊಲೀಸರು ನಟೋರಿಯಸ್ ಮನೆಗಳ್ಳನನ್ನು ಬಂಧಿಸಿದ್ದಾರೆ. ಆರು ಪ್ರಕರಣಗಳಲ್ಲಿ ಬೇಕಾಗಿದ್ದ ಉತ್ತರಹಳ್ಳಿ ನಿವಾಸಿ ...

Published On :
ಬೆಂಗಳೂರು: ಪೂರ್ವ ವಿಭಾಗದ ಪೊಲೀಸರು ನಟೋರಿಯಸ್ ಮನೆಗಳ್ಳನನ್ನು ಬಂಧಿಸಿದ್ದಾರೆ. ಆರು ಪ್ರಕರಣಗಳಲ್ಲಿ ಬೇಕಾಗಿದ್ದ ಉತ್ತರಹಳ್ಳಿ ನಿವಾಸಿ ಮಂಜುನಾಥ್ ಅಲಿಯಾಸ್ ಕಲ್ಕೆರೆ ಮಂಜ ಎಂಬುವನನ್ನು ಭಾರತೀನಗರ ಪೊಲೀಸರು ಬಂಧಿಸಿರುವುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ.
ಮಂಜುನಾಥ್ ಅಲಿಯಾಸ್ ಮಂಜ ತಮಿಳುನಾಡು ಮೂಲದವನಾಗಿದ್ದು, ತುಂಬಾ ಚಿಕ್ಕವನಿದ್ದಾಗಲೇ ಬೆಂಗಳೂರು ಸೇರಿ ಅಂದಿನಿಂದಲೇ ಕಳ್ಳತನ ಆರಂಭಿಸಿದ್ದ. 2015 ರಿಂದ 2017 ರವರೆಗೆ ಜೈಲು ಸೇರಿದ್ದ ಈತ ಆಗಸ್ಟ್ ನಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದ. ಅದಾದ ನಂತರ ಮನೆಗಳ್ಳತನ ಆರಂಭಿಸಿದ್ದ.
ಭಾರತೀನಗರದಲ್ಲಿ 2 ಮನೆ, ಪುಲಿಕೇಶಿನಗರ , ಸೋಲದೇವನಗಳ್ಳಿ ಮತ್ತು ಸೂರ್ಯನಗರದಲ್ಲಿ ಒಂದೊಂದು ಮನೆಯಲ್ಲಿ ಕಳ್ಳತನ ಮಾಡಿದ್ದ ಹಾಗೂ ಹಾಸನ ಜಿಲ್ಲೆಯಲ್ಲೂ ಈತನ ವಿರುದ್ಧ ಪ್ರಕರಣ ದಾಖಲಾಗಿದೆ.
ಕದ್ದ ಹಣವನ್ನು ಐಷಾರಾಮಿ ಹೋಟೆಲ್ ಗಳಲ್ಲಿ ಆಹಾರ ಸೇವನೆ, ಬ್ರ್ಯಾಂಡೆಡ್ ಬಟ್ಟೆ ಹಾಗೂ ಗರ್ಲ್ ಫ್ರೆಂಡ್ ಗಳಿಗಾಗಿ ಖರ್ಚು ಮಾಡುತ್ತಿದ್ದ. ಜನ ಸಂದಣಿ ಕಡಿಮೆ ಇರುವ ದೊಡ್ಡ ದೊಡ್ಡ ಮನೆಗಳಿಗೆ ಟಾರ್ಗೆಟ್ ಇಡುತ್ತಿದ್ದ ಈತ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ನಂತರ ಕನ್ನ ಹಾಕುತ್ತಿದ್ದ.
ತುಮಕೂರಿನ ವ್ಯಕ್ತಿಯೊಬ್ಬರಿಂದ ಸೆಕೆಂಡ್ ಹ್ಯಾಂಡ್ ಸ್ವಿಫ್ಟ್ ಕಾರು ಖರೀದಿಸಿದ್ದ ಮಂಜ ಮುಂಗಡವಾಗಿ ಒಂದೂವರೆ ಲಕ್ಷ ರೂ ಹಣ ಪಾವತಿಸಿದ್ದ. ಮನೆಯ ಮುಂದೆ ಕಾರು ನಿಲ್ಲಿಸಿ, ಮನೆಯೊಳಗೆ ಕಳ್ಳತನ ಮಾಡಿ ನಂತರ ಅದೇ ಕಾರಿನಲ್ಲಿ ಪರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯಿಂದ 850 ಗ್ರಾಂ ಚಿನ್ನ, ಬೆಳ್ಳಿಯ ಆಭರಣ ಮತ್ತು ಕಾರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


