ಕಲಬುರ್ಗಿ: ಜೂಜು ಅಡ್ಡೆ ಮೇಲೆ ಪೋಲೀಸ್ ದಾಳಿ, 17 ಜನರ ಬಂಧನ, 7.52 ಲಕ್ಷ ರೂ. ಜಪ್ತಿ
ಕಲಬುರ್ಗಿ ಜಿಲ್ಲೆ ಸೇಡಂ ನಗರದಲ್ಲಿನ ಜೂಜಿನ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೋಲೀಸರು 17 ಜನರನ್ನು ಬಂಧಿಸಿದ್ದಲ್ಲದೆ ಬರೋಬ್ಬರಿ 7.52ಲಕ್ಷ ರೂ. ಗಳನ್ನು ವಶಕ್ಕೆ ಪಡೆದಿದ್ದಾರೆ.

Published On :
ಕಲಬುರ್ಗಿ: ಕಲಬುರ್ಗಿ ಜಿಲ್ಲೆ ಸೇಡಂ ನಗರದಲ್ಲಿನ ಜೂಜಿನ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೋಲೀಸರು 17 ಜನರನ್ನು ಬಂಧಿಸಿದ್ದಲ್ಲದೆ ಬರೋಬ್ಬರಿ 7.52ಲಕ್ಷ ರೂ. ಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರ ಬಳಿ ಇದ್ದ 8 ಬೈಕ್, 2 ಕಾರು ಮತ್ತು 18 ಮೊಬೈಲ್ ಗಳನ್ನು ಸಹ ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಇಷ್ಟು ಭಾರೀ ಮೊತ್ತದ ಜೂಜಿನ ಹಣವನ್ನು ಜಪ್ತಿ ಮಾಡಿರುವುದು ಕಲಬುರ್ಗಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಯಾಗಿದೆ ಎಂದು ಐಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಇದಲ್ಲದೆ ಅಕ್ರಮವಾಗಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಕಲಬುರ್ಗಿ ನಗರದ ನಾಲ್ವರನ್ನು ಬಂಧಿಸಿದ್ದು 49.17ಲಕ್ಷ ರೂ. ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕಲಬುರ್ಗಿgulbargaಜೂಜು ಅಡ್ಡೆSedamಸೇಡಂgambling cruisesGulbarga PoliceIGP Alok Kumarಕಲಬುರ್ಗಿ ಪೊಲೀಸ್ಐಜಿಪಿ ಅಲೋಕ್ ಕುಮಾರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


