ರಾಜ್ಯ

ಬಿಜೆಪಿ ಕಾರ್ಯಕರ್ತರಿಂದ 'ಪರಿವರ್ತನಾ ರ್ಯಾಲಿ' ಯಾತ್ರಾ ವಾಹನದ ಮೇಲೆ ತೆಂಗಿನಕಾಯಿ ತೂರಾಟ

ಪರಿವರ್ತನಾ ರ್ಯಾಲಿ ವೇಳೆ ಬಿಜೆಪಿಯ ಮತ್ತೊಂದು ಬಣದ ಕಾರ್ಯಕರ್ತರು ಯಾತ್ರಾ ವಾಹನದ ಮೇಲೆ ತೆಂಗಿನ ಕಾಯಿ ತೂರಾಟ ನಡೆಸಿದ ಘಟನೆ ತುರುವೇಕೆರೆ ತಾಲೂಕಿನ ಬಾಣಸಂದ್ರದಲ್ಲಿ ಶುಕ್ರವಾರ ನಡೆದಿದೆ...

ಬಿಜೆಪಿ ಕಾರ್ಯಕರ್ತರಿಂದ 'ಪರಿವರ್ತನಾ ರ್ಯಾಲಿ' ಯಾತ್ರಾ ವಾಹನದ ಮೇಲೆ ತೆಂಗಿನಕಾಯಿ ತೂರಾಟ
ಬಿಜೆಪಿ ಪರಿವರ್ತನಾ ರ್ಯಾಲಿ ವೇಳೆ ಯಾತ್ರಾ ವಾಹನದ ಮೇಲೆ ತೆಂಗಿನ ಕಾಯಿ ತೂರಾಟ
Published On :

ತುಮಕೂರು: ಪರಿವರ್ತನಾ ರ್ಯಾಲಿ ವೇಳೆ ಬಿಜೆಪಿಯ ಮತ್ತೊಂದು ಬಣದ ಕಾರ್ಯಕರ್ತರು ಯಾತ್ರಾ ವಾಹನದ ಮೇಲೆ ತೆಂಗಿನ ಕಾಯಿ ತೂರಾಟ ನಡೆಸಿದ ಘಟನೆ ತುರುವೇಕೆರೆ ತಾಲೂಕಿನ ಬಾಣಸಂದ್ರದಲ್ಲಿ ಶುಕ್ರವಾರ ನಡೆದಿದೆ. 

ಬಿಜೆಪಿಯ ಮತ್ತೊಂದು ಬಣ ಬಾಣಸಂದ್ರದಲ್ಲಿ ತಮ್ಮ ಕಾರ್ಯಕರ್ತರನ್ನು ಸಂಘಟಿಸಿ ಪರಿವರ್ತನಾ ರ್ಯಾಲಿ ಸ್ವಾಗತಕ್ಕೆ ಸಿದ್ಧತೆಗಳನ್ನು ನಡೆಸಿತ್ತು. ಇದರಂತೆ ಸಾರ್ವಜನಿಕ ಸಮಾರಂಭಕ್ಕೆ ವೇದಿಕೆಯನ್ನೂ ಹಾಕಿತ್ತು. ಆದರೆ, ಅದೇ ಮಾರ್ಗವಾಗಿ ಚಿಕ್ಕನಾಯಕನಹಳ್ಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು, ಬಾಣಸಂದ್ರದಲ್ಲಿ ಸಭೆಗೆ ನಿಲ್ಲದ ಕಾರಣ ಸ್ಥಳದಲ್ಲಿ ಕೆಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತ್ತು. 

ಕೆಲ ಬಿಜೆಪಿ ಕಾರ್ಯಕರ್ತರು ಪರಿವರ್ತನಾ ರ್ಯಾಲಿ ವಾಹನಕ್ಕೆ ತೆಂಗಿನ ಕಾಯಿ ತೂರಾಟ ನಡೆಸಿದ್ದರು. ಇದರ ಪರಿಣಾಮ ರಥ ಮುಂಭಾಗದ ಗಾಜು ಛಿದ್ರಗೊಂಡಿತು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.