ಮೈಸೂರು: ನವ ವಿವಾಹಿತೆ ಶವವಾಗಿ ಪತ್ತೆ, ಸೊಸೆ ಸಾವಿನಿಂದ ಮನನೊಂದು ಮಾವ ಆತ್ಮಹತ್ಯೆ
ಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ನವವಿವಾಹಿತೆ ಶವವಾಗಿ ಪತ್ತೆಯಾಗಿದ್ದಾಳೆ. ಇದೇ ವೇಳೆ ಸೊಸೆಯ ಸಾವಿನ ಸುದ್ದಿ ಕೇಳಿದ ಮಾವ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Published On :
ಮೈಸೂರು: ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ನವವಿವಾಹಿತೆ ಶವವಾಗಿ ಪತ್ತೆಯಾಗಿದ್ದಾಳೆ. ಇದೇ ವೇಳೆ ಸೊಸೆಯ ಸಾವಿನ ಸುದ್ದಿ ಕೇಳಿದ ಮಾವ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರಿನಲ್ಲಿ ನಡೆದ ಘಟನೆಯಲ್ಲಿ ರುಕ್ಮಿಣಿ (24 ) ಸಾವನ್ನಪ್ಪಿದ ನತದೃಷ್ಟೆಯಾಗಿದ್ದು ತಮ್ಮ ಸೊಸೆಯ ಸಾವಿನಿಂದ ನೊಂದ ಮಾವ ರಮೇಶ್ (50) ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂರು ತಿಂಗಳ ಹಿಂದೆ ಶಾದಮಹಳ್ಳಿಯ ಪುನೀತ್ ನನ್ನು ವಿವಾಹವಾಗಿದ್ದ ರುಕ್ಮಿಣಿ . ಅ.27ರಂದು ಪತಿಯೊಡನೆ ಜಗಳ ಮಾಡಿಕೊಂಡು ಮನೆ ತೊರೆದು ಹೋಗಿದ್ದಳು. ಮೈಸೂರು ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯ ಗೊರೂರಿನ ವರುಣಾ ನಾಲೆಯಲ್ಲಿ ಇಂದು ರುಕ್ಮಿಣಿ ಮೃತದೇಹ ಪತ್ತೆಯಾಗಿತ್ತು.
ಮಗ ಹಾಗೂ ಸೊಸೆ ನಡುವಿನ ಭಿನ್ನಾಭಿಪ್ರಾಯದಿಂದ ನೊಂದಿದ್ದ ಮಾವ ರಮೇಶ್ ಇದೀಗ ಸೊಸೆ ಸಾವಿನಿಂದ ನೊಂದು ಶ್ರೀರಂಗಪಟ್ಟಣದ ಪಾಲಹಳ್ಳಿಯ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
mysoreಮೈಸೂರುMarried Womanವಿವಾಹಿತ ಮಹಿಳೆwoman found deadfather in law commits suicideಮಹಿಳೆ ಶವ ಪತ್ತೆಮಾವ ಆತ್ಮಹತ್ಯೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


