ರಾಜ್ಯ

ತಲಕಾವೇರಿ ವನ್ಯಧಾಮ ಈಗ ಸೂಕ್ಷ್ಮ ಪರಿಸರ ವಲಯ: ಕೇಂದ್ರ

ತಲಕಾವೇರಿ ವನ್ಯಜೀವಿ ಅರಣ್ಯಧಾಮ ಸೂಕ್ಷ್ಮ ಪರಿಸರ ವಲಯ ಎಂದು ಕೇಂದ್ರ ಸರ್ಕಾರದಿಂದ ಗುರುತಿಸಿಲ್ಪಟ್ಟಿದೆ...

ತಲಕಾವೇರಿ ವನ್ಯಧಾಮ ಈಗ ಸೂಕ್ಷ್ಮ ಪರಿಸರ ವಲಯ: ಕೇಂದ್ರ
ತಲಕಾವೇರಿ ವನ್ಯಜೀವಿ ಧಾಮ
Published On :
ಬೆಂಗಳೂರು: ತಲಕಾವೇರಿ ವನ್ಯಜೀವಿ ಅರಣ್ಯಧಾಮ ಸೂಕ್ಷ್ಮ ಪರಿಸರ ವಲಯ ಎಂದು ಕೇಂದ್ರ ಸರ್ಕಾರ ಗುರುತಿಸಿದೆ. 
ಈ ವಲಯದ 1 ರಿಂದ 16 ಕಿಮೀ ವರೆಗಿನ ಪ್ರದೇಶವನ್ನು ರಕ್ಷಿತಾರಣ್ಯ ಎಂದು ಗುರುತಿಸಲಾಗಿದೆ. ಈ ಸೂಕ್ಷ್ಮ ಪರಿಸರ ವಲಯ ಕೇರಳ ರಾಜ್ಯದ ಗಡಿಯೊಂದಿಗೆ ಸೇರಿಕೊಂಡಿದೆ.
ಮೇ 15ರ ನೋಟಿಫಿಕೇಶನ್ ಪ್ರಕಾರ, ಎಲ್ಲಾ ಹೊಸ ವಾಣಿಜ್ಯ ಗಣಿಗಾರಿಕೆ, ಹೊಸ ಕೈಗಾರಿಕೆಗಳು, ಹಾಗೂ ವಿಸ್ತ್ರತ ಮಾಲಿನ್ಯ ಮಾಡುವ ಕೈಗಾರಿಕೆಗಳು, ಸಾಮಿಲ್ ಗಳು, ದೊಡ್ಡ ಪ್ರಮಾಣದ ಹೈಡ್ರೋ ಎಲೆಕ್ಟ್ರಿಕ್ ಯೋಜನೆ,  ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಭೂಮಿಯ ಬಳಕೆ ರೀತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅಂದರೆ ಕೃಷಿ ಭೂಮಿಯಾಗಿ ಬದಲಾವಣೆ, ತೋಟಗಾರಿಕೆ ಪ್ರದೇಶವನ್ನು ವಾಣಿಜ್ಯ ಅಥವಾ ಕೈಗಾರಿಕಾ ಚಟುವಟಿಕೆಗಳಿಗೆ ಬಳಸಲು ಅನುಮತಿ ನೀಡಲಾಗುವುದಿಲ್ಲ. ರಕ್ಷಿತಾರಣ್ಯ ಪ್ರದೇಶದಲ್ಲಿ ಯಾವುದೇ ಹೊಟೆಲ್ ಅಥವಾ ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.