ದೇವಾಲಯಕ್ಕೆ ದಲಿತರ ಪ್ರವೇಶ: ತುಮಕೂರಿನಲ್ಲಿ ಅರ್ಧಕ್ಕೆ ರದ್ದಾದ ಗ್ರಾಮದೇವತೆ ಹಬ್ಬ
ದೇವಾಲಯಕ್ಕೆ ದಲಿತರು ಪ್ರವೇಶಿಸಿದರು ಎಂಬ ಕಾರಣಕ್ಕೆ ಆರಂಭವಾಗಿದ್ದ ಗ್ರಾಮದೇವತೆ ಹಬ್ಬವನ್ನು ಅರ್ಧಕ್ಕೆ ರದ್ಧುಗೊಳಿಸಿರುವ ಘಟನೆ ತುಮಕೂರಿನ...

Published On :
ತುಮಕೂರು: ದೇವಾಲಯಕ್ಕೆ ದಲಿತರು ಪ್ರವೇಶಿಸಿದರು ಎಂಬ ಕಾರಣಕ್ಕೆ ಆರಂಭವಾಗಿದ್ದ ಗ್ರಾಮದೇವತೆ ಹಬ್ಬವನ್ನು ಅರ್ಧಕ್ಕೆ ರದ್ಧುಗೊಳಿಸಿರುವ ಘಟನೆ ತುಮಕೂರಿನ ಕೊತ್ತಿಹಳ್ಳಿಯಲ್ಲಿ ನಡೆದಿದೆ.
ದಲಿತರು ದೇವಾಲಯ ಪ್ರವೇಶಿಸಿದ್ದಕ್ಕೆ ದೇವಾಲಯದಲ್ಲಿನ ಗೂಳಿ ಇದ್ದಕ್ಕಿದಂತೆ ನಿಷ್ಕ್ರಿಯವಾಗಿ ಆಹಾರ ಸೇವಿಸುವುದನ್ನು ನಿಲ್ಲಿಸಿದೆ ಎಂದು ಹೇಳಲಾಗಿದೆ.
ನಗರದಲ್ಲಿ ಮೇ 19 ರಿಂದ ಹುಚ್ಚಂಗಿಯಮ್ಮನ ಜಾತ್ರೆ ಆರಂಭವಾಗಿದೆ. ಈ ವೇಳೆ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ದೇವಾಲಯಕ್ಕೆ ಭೇಟಿ ನೀಡಿದ್ದರು, ಈ ಸಂದರ್ಭದಲ್ಲಿ ಅವರ ಬೆಂಬಲಿಗರು ಸಂಭ್ರಮಾಚರಣೆಗಾಗಿ ಪಟಾಕಿ ಸಿಡಿಸಿದ ಕಾರಣ ದೇವಾಲಯದ ಗೂಳಿ ಶಬ್ದಕ್ಕೆ ಹೆದರಿ ಓಡಿ ಹೋಯಿತು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.
ಮೇ20 ರಂದು ಬೆಳಗ್ಗೆ ಸುಮಾರು 40 ದಲಿತ ಕುಟುಂಬಗಳು ಆರತಿಯೊಂದಿಗೆ ದೇವಾಲಯಕ್ಕೆ ಪ್ರವೇಶಿಸಿದ್ದಾರೆ. ಆ ಕೂಡಲೇ ದೇವಾಲಯ ಪ್ರಾಧಿಕಾರ ಹಬ್ಬವನ್ನು ರದ್ಧುಗೊಳಿಸಿದೆ.
ಕಳೆದ ವರ್ಷ ಜಾತ್ರೆಯ ಸಂದರ್ಭದಲ್ಲಿ ಹಬ್ಬದ ಖರ್ಚಿಗಾಗಿ ಹಣ ನೀಡಿದರೇ ದಲಿತ ಕಾಲೋನಿಯಲ್ಲಿ ದೇವಾಲಯದ ಮೆರವಣಿಗೆ ನಡೆಸುವುದಾಗಿ ದೇವಾಲಯ ಆಡಳಿತ ಮಂಡಳಿ ಭರವಸೆ ನೀಡಿತ್ತು. ಹೀಗಾಗಿ ನಾವು 12 ಸಾವಿರ ಹಣ ಸಂಗ್ರಹಿಸಿದ್ದು ಕೊಡುವುದು ತಡವಾಗಿದೆ. ಕೊಟ್ಟ ಮಾತಿನಂತೆ ದಲಿತ ಕೇರಿಗಳಲ್ಲಿ ದೇವರ ಮೆರವಣಿಗೆ ಮಾಡಬೇಕೆಂಬ ಕಾರಣದಿಂದಾಗಿ ಹಬ್ಬವನ್ನು ರದ್ಧುಗೊಳಿಸಲಾಗಿದೆ ಎಂದು ದಲಿತ ಸಮುದಾಯದ ಶಿವಣ್ಣ ಎಂಬಾತ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


