ಮೈಸೂರು-ಹುಬ್ಬಳ್ಳಿ ರೈಲು ’ವಿಶ್ವಮಾನವ ಎಕ್ಸ್ ಪ್ರೆಸ್ ಗೆ ಚಾಲನೆ
ಮೈಸೂರು ಹಾಗೂ ಹುಬ್ಬಳ್ಳಿ (ಬೆಂಗಳೂರು ಮಾರ್ಗವಾಗಿ ಸಂಚರಿಸುವ) ಹೊಸ ರೈಲು ಸೇವೆಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಮೇ.23 ರಂದು ಚಾಲನೆ ನೀಡಿದ್ದಾರೆ.

Published On :
ಮೈಸೂರು: ಮೈಸೂರು ಹಾಗೂ ಹುಬ್ಬಳ್ಳಿ (ಬೆಂಗಳೂರು ಮಾರ್ಗವಾಗಿ ಸಂಚರಿಸುವ) ಹೊಸ ರೈಲು ಸೇವೆಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಮೇ.23 ರಂದು ಚಾಲನೆ ನೀಡಿದ್ದಾರೆ.
ಪ್ರತಿದಿನ ಸಂಚರಿಸಲಿರುವ ವಿಶ್ವಮಾನವ ಎಕ್ಸ್ ಪ್ರೆಸ್ ರೈಲು ಮೈಸೂರು ಹಾಗೂ ತುಮಕೂರು ನಡುವೆ ನೇರ ಸಂಪರ್ಕ ಹೊಂದಿರುವ ಮೊದಲ ರೈಲಾಗಿದ್ದು, ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಜನರಿಗೆ ಅತಿ ಹೆಚ್ಚು ಪ್ರಯೋಜನವಾಗಲಿದೆ.
ಮೈಸೂರು-ಬೆಂಗಳೂರು ನಡುವೆ ಈಗಾಗಲೇ 17 ರೈಲುಗಳು ಸಂಚರಿಸೌತ್ತಿವೆ. ಆದರೆ ಪ್ರತಿದಿನ ಸಂಚರಿಸುವ ಪ್ರಯಾಣಿಕರು ಚಾಮುಂಡಿ ಎಕ್ಸ್ ಪ್ರೆಸ್ ನ್ನೇ ಅವಲಂಬಿಸಬೇಕಾಗಿತ್ತು. ಅತಿ ಹೆಚ್ಚು ಜನರು ಚಾಮುಂಡಿ ಎಕ್ಸ್ ಪ್ರೆಸ್ ನಲ್ಲೇ ಸಂಚರಿಸುತ್ತಿದ್ದರಿಂದ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತೊಂದು ರೈಲು ಸೇವೆಗೆ ಒತ್ತಾಯ ಕೇಳಿಬಂದಿತ್ತು.
ಮೈಸೂರಿನಿಂದ ಸಂಜೆ 6:45 ಕ್ಕೆ ಹೊರಡಲಿರುವ ಚಾಮುಂಡಿ ಎಕ್ಸ್ ಪ್ರೆಸ್ ರೈಲು ಬೆಂಗಳೂರಿಗೆ 9:50 ಕ್ಕೆ ಆಗಮಿಸುತ್ತದೆ. ಅಂತೆಯೇ ಬೆಂಗಳೂರಿನಿಂದ 6:15 ಕ್ಕೆ ಹೊರಟು ಮೈಸೂರಿಗೆ 9:೦೦ಕ್ಕೆ ತಲುಪುತ್ತದೆ. ಹುಬ್ಬಳ್ಳಿ–ಮೈಸೂರು–ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್’ ಹೆಸರಿನ ಈ ರೈಲು (ಸಂಖ್ಯೆ 17325) ಮೇ 24ರಿಂದ ನಿತ್ಯ ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಸಂಜೆ 5.40ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ 5.45ಕ್ಕೆ ಹೊರಟು ರಾತ್ರಿ 8.40ಕ್ಕೆ ಮೈಸೂರಿಗೆ ಬರಲಿದೆ.
ಹಾಗೆಯೇ, ರೈಲು (ಸಂಖ್ಯೆ 17326) ನಿತ್ಯ ಬೆಳಿಗ್ಗೆ 6.15ಕ್ಕೆ ಮೈಸೂರಿನಿಂದ ಹೊರಟು 9.10ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ 9.15ಕ್ಕೆ ಹೊರಟು ಸಂಜೆ 7.05ಕ್ಕೆ ಹುಬ್ಬಳ್ಳಿ ತಲುಪಲಿದೆ. ಇದರಿಂದ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಇದೆ. ರೈಲು ಸೇವೆ ಉದ್ಘಾಟನೆ ಮಾಡಿ ಮಾತನಾಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಈ ರೈಲು ಸೇವೆಯಿಂದ ಹೆಚ್ಚು ಪ್ರಯೋಜನವಾಗಲಿದೆ. ಚಾಮುಂಡಿ ಎಕ್ಸ್ ಪ್ರೆಸ್ ಗಿಂತ ಅರ್ಧ ಗಂಟೆ ಮುನ್ನ ಹೊಸ ರೈಲು ಹೊರಡಲಿದ್ದು, ಉದ್ಯೋಗಿಗಳು ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಹೊಸ ರೈಲು ಉದ್ಘಾಟನೆಯಿಂದ ಈ ಭಾಗದ ಪ್ರಯಾಣೀಕರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
BengaluruರೈಲುMysuru-Hubballi Daily ExpressMP Pratap Simhaಮೈಸೂರು-ಹುಬ್ಬಳ್ಳಿವಿಶ್ವಮಾನವ ಎಕ್ಸ್ ಪ್ರೆಸ್ಸಂಸದ ಪ್ರತಾಪ್ ಸಿಂಹ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


