ರಾಜ್ಯ

ಮಂಡ್ಯದಲ್ಲಿ 4 ಆನೆಗಳು ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು

ಜಿಲ್ಲೆಯ ಕೃಷಿ ಜಮೀನಿನಲ್ಲಿ ನಾಲ್ಕು ಕಾಡಾನೆಗಳು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ತುರಗನೂರು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ....

ಮಂಡ್ಯದಲ್ಲಿ 4 ಆನೆಗಳು ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು
ಸಾಂದರ್ಭಿಕ ಚಿತ್ರ
Published On :
ಮಂಡ್ಯ: ಜಿಲ್ಲೆಯ ಕೃಷಿ ಜಮೀನಿನಲ್ಲಿ ನಾಲ್ಕು ಕಾಡಾನೆಗಳು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ತುರಗನೂರು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಶನಿವಾರ ಆಲದಹಳ್ಳಿಯಲ್ಲಿ ಮೊದಲು ಆನೆಗಳು ಕಾಣಿಸಿಕೊಂಡಿದ್ದವು, ನಂತರ ಗಾಜನೂರು, ಕಂಸಾಗರದಲ್ಲಿ ಪ್ರತ್ಯಕ್ಷವಾಗಿದ್ದವು. ಈದ ಸದ್ಯ ಕಾಡಾನೆಗಳು ತುರಗನೂರು ಗ್ರಾಮದಲ್ಲಿ ಬೀಡು ಬಿಟ್ಟಿವೆ.
ಕಾಡಾನೆಗಳು ಆಗಮನದಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ, ಅರಣ್ಯಾಧಿಕಾರಿಗಳು ಆನೆಗಳ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದು, ರಾತ್ರಿ ಸುಮಾರು 7.20ರ ವೇಳೆಗೆ ಮರಗಳ ನಡುವೆ ಮರೆಯಾಗಿವೆ. 
ಆನೆಗಳು ಕಾಡಿಗೆ ವಾಪಸ್ ತೆರಳಿವೆ, ಆದರೆ ಮರಳಿ ಬರುವ ಸಾಧ್ಯತೆಯಿದೆ ಎಂದು ಮಂಡ್ಯ ವಲಯ ಅರಣ್ಯಾಧಿಕಾರಿ ರಮೇಶ್ ಹೇಳಿದ್ದಾರೆ.
ಅರಣ್ಯದ 8 ಕೀಮೀ ವ್ಯಾಪ್ತಿಯಲ್ಲಿ ಕಂದಕಗಳನ್ನು ನಿರ್ಮಿಸುವ ಅವಶ್ಯಕತೆಯಿದೆ ಎಂದು ಮಂಡ್ಯ ಡಿಸಿಎಫ್ ಧನಂಜಯ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.