ರಾಜ್ಯ

ಸಿನಿಮೀಯ ರೀತಿಯಲ್ಲಿ ಹಸುಕಳ್ಳರನ್ನು ಹಿಡಿದ ಸೋಮವಾರಪೇಟೆ ಪೊಲೀಸರು

ಕೊಟ್ಟಿಗೆಯಲ್ಲಿ ಕಟ್ಟಿದ್ದ 8 ಹಸುಗಳನ್ನು ಕದ್ದು, ಟೆಂಪೊದಲ್ಲಿ ಮಂಗಳೂರಿಗೆ ಸಾಗಿಸುತ್ತಿದ್ದ ಆರೋಪಿ ಗಳನ್ನು ಶನಿವಾರ ಬೆಳಿಗ್ಗೆ ಬೆನ್ನಟ್ಟಿದ ಪೊಲೀಸರು...

ಸಿನಿಮೀಯ ರೀತಿಯಲ್ಲಿ ಹಸುಕಳ್ಳರನ್ನು ಹಿಡಿದ ಸೋಮವಾರಪೇಟೆ ಪೊಲೀಸರು
ಸಾಂದರ್ಭಿಕ ಚಿತ್ರ
Published On :
ಸೋಮವಾರಪೇಟೆ: ಕೊಟ್ಟಿಗೆಯಲ್ಲಿ ಕಟ್ಟಿದ್ದ 8 ಹಸುಗಳನ್ನು ಕದ್ದು, ಟೆಂಪೊದಲ್ಲಿ ಮಂಗಳೂರಿಗೆ ಸಾಗಿಸುತ್ತಿದ್ದ ಆರೋಪಿ ಗಳನ್ನು ಶನಿವಾರ ಬೆಳಿಗ್ಗೆ ಬೆನ್ನಟ್ಟಿದ ಪೊಲೀಸರು, ಸಮೀಪದ ದೋಣಿಗಲ್‌ ಬಳಿ ವಶಕ್ಕೆ ಪಡೆದಿದ್ದಾರೆ.
ಸಿನಿಮೀಯ ರೀತಿಯಲ್ಲಿ ಕಳ್ಳರನ್ನು ಹಿಂಬಾಲಿಸಿದ ಪೊಲೀಸರು ಇಬ್ಬರು  ಆರೋಪಿಗಳನ್ನು ಬಂಧಿಸಿದ್ದಾರೆ. ಏಳು ಜನರ ತಂಡ ರಾಸುಗಳನ್ನು ಕಳವು ಮಾಡಿ ಒಯ್ಯುತ್ತಿತ್ತು. ಇದರಲ್ಲಿ ಐವರು ಪರಾರಿಯಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ.ವಶಪಡಿಸಿಕೊಂಡ ರಾಸುಗಳನ್ನು ಕೊಡ್ಲಿಪೇಟೆ ಠಾಣೆ ಆವರಣದಲ್ಲಿ ಕಟ್ಟಿದ್ದು, ಅಲ್ಲಿಯೇ ಕೃತ್ಯಕ್ಕೆ ಬಳಸಿದ ವಾಹನವನ್ನೂ ನಿಲ್ಲಿಸಲಾಗಿತ್ತು.
ಮಾಹಿತಿ ತಿಳಿದು ಠಾಣೆ ಬಳಿ ಗುಂಪುಗೂಡಿದ ಸಾರ್ವಜನಿಕರು, ರಾಸುಗಳ ಕಳವಿಗೆ ಬಳಸಿದ ವಾಹನಕ್ಕೆ ಬೆಂಕಿಹಚ್ಚಿದ್ದಾರೆ.ಕಳುವಾದ ರಾಸುಗಳು ಬೇಳೂರು, ತೊರೆನೂರು ಗ್ರಾಮಕ್ಕೆ ಸೇರಿವೆ. ಹಸುಗಳನ್ನು ಕದ್ದು ಟೆಂಪೊ ಟ್ರಾವೆಲ್‌ನಲ್ಲಿ ತುಂಬಿಸಿ ಕೊಡ್ಲಿಪೇಟೆ ಮಾರ್ಗವಾಗಿ ಮಂಗಳೂರಿಗೆ ಸಾಗಿಸುತ್ತಿದ್ದರು.
ವಿಷಯ ತಿಳಿದ ಪೊಲೀಸರು ಶನಿವಾರಸಂತೆ ಠಾಣೆ ವ್ಯಾಪ್ತಿಯ, ಸಕಲೇಶಪುರ ತಾಲ್ಲೂಕು ದೋಣಿಗಲ್‌ ಬಳಿ ಟೆಂಪೊ ಅಡ್ಡಗಟ್ಟಿದರು. ಆಗ ದುಷ್ಕರ್ಮಿಗಳು ಪೊಲೀಸರ ಮೇಲೆ ವಾಹನ ಹರಿಸಲು ಯತ್ನಿಸಿದ್ದಾರೆ. ಕೊನೆಗೆ ರಾಸುಗಳನ್ನು ರಕ್ಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.