ಶೀಘ್ರವೇ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಗಳಲ್ಲಿ 1 ರು. ಗೆ 1 ಲೀಟರ್ ನೀರು
ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಗಳಲ್ಲಿ ಕಾಯುವ ಪ್ರಯಾಣಿಕರಿಗೆ ಶೀಘ್ರವೇ 1 ರು. ಗೆ 1 ಲೀಟರ್ ಶುದ್ದ ಕುಡಿಯುವ ನೀರು ..

Published On :
ಬೆಂಗಳೂರು: ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಗಳಲ್ಲಿ ಕಾಯುವ ಪ್ರಯಾಣಿಕರಿಗೆ ಶೀಘ್ರವೇ 1 ರು. ಗೆ 1 ಲೀಟರ್ ಶುದ್ದ ಕುಡಿಯುವ ನೀರು ಸಿಗಲಿದೆ.
ನಗರದ ಎಲ್ಲಾ ಪ್ರಮುಖ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಗಳಲ್ಲಿ ರಿವರ್ಸ್ ಓಸ್ಮೋಸಿಸ್ ವಾಟರ್ ಪ್ಲಾಂಟ್ ಸ್ಥಾಪಿಸಲು ಯೋಜಿಸಲಾಗಿದೆ. ಪ್ರತಿ ಲೀಟರ್ ಪ್ಯಾಕೇಜ್ಡ್ ವಾಟರ್ ಗೆ ರು. 20 ವೆಚ್ಚ ತಗಲುತ್ತದೆ. ಪ್ರಯಾಣಿಕರು ಬಾಟಲ್ ತಂದು 1 ರು ಹಾಕಿ ನೀರನ್ನು ತುಂಬಿಸಿಕೊಳ್ಳಬಹುದಾಗಿದೆ.
ನೈರುತ್ಯ ರೈಲ್ವೆ ನಿಲ್ದಾಣದಲ್ಲಿ 1 ರು.ಗೆ 300 ಮಿಲಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ 25 ರು.ಗೆ 5 ಲೀಟರ್ ನೀರನ್ನು ಮಾರಾಟ ಮಾಡಲಾಗುತ್ತಿದೆ.
ಗುರುವಾರ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಐಷಾರಾಮಿ ಬಸ್ ಪ್ರಯಾಣಿಕರಿಗೆ ಉಚಿತನೀರು ನೀಡಲು ಪುನಃ ಆರಂಭಿಸಿದೆ. ಕೆಎಸ್ ಆರ್ ಟಿಸಿ ಪ್ರೀಮಿಯಮ್ ಬಸ್ ಗಳಲ್ಲಿ 500 ಮಿಲಿ ಟೀಟರ್ ಪ್ಯಾಕೇಜ್ಡ್ ಕುಡಿಯುವ ನೀರನ್ನು ಪ್ರಯಾಣಿಕರಿಗೆ ಉಚಿತವಾಗಿ ನೀಡುವ ಯೋಜನೆಯನ್ನು ಆರಂಭಿಸಿದೆ.
ಬೆಳಗ್ಗೆ 5-ರಿಂದ 11 ಗಂಟೆ ವರೆಗೆ ಸಂಚರಿಸುವ ಮುಂಜಾನೆ ಬಸ್ ಗಳಲ್ಲಿ ವೃತ್ತ ಪತ್ರಿಕೆಗಳನ್ನು ನೀಡಲಾಗುತ್ತಿತ್ತು.
ಅರ್ಧ ಲೀಟರ್ ನೀರಿನ ಬಾಟಲಿಗೆ ವಾರ್ಷಿಕವಾಗಿ ರು. 6 ಕೋಟಿ ಖರ್ಚಾಗುತ್ತಿತ್ತು. ಹೀಗಾಗಿ ಸಂಸ್ಥೆಗೆ ಹೊರೆಯಾಗುತ್ತಿದೆ ಎಂಬ ಕಾರಣಕ್ಕೆ ಈ ಯೋಜನೆಯನ್ನು ಮೂರು ತಿಂಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು.
ಸರ್ಕಾರಿ ಸ್ವಾಮ್ಯದ ಎಂಎಸ್‍ಐಎಲ್, ಪ್ರತಿ ಅರ್ಧ ಲೀಟರ್ ನೀರಿನ ಬಾಟಲಿಗೆ ರು. 4.30 (ಹಿಂದಿನ ದರ ರು. 5.43) ದರದಲ್ಲಿ ಪೂರೈಸುತ್ತಿದೆ. ಪ್ರಯಾಣಿಕರ ಮನವಿ ಮೇರೆಗೆ ದಿನಪೂರ್ತಿ ನೀರು ನೀಡುತ್ತಿದ್ದೇವೆ’ ಎಂದರು. ಜೊತೆಗೆ, ‘ರಾಜಹಂಸ ಸೇರಿದಂತೆ ಪ್ರೀಮಿಯಂ ಸೇವೆಯ 104 ಬಸ್‌ಗಳಲ್ಲಿ ಬೆಳಿಗ್ಗೆ 5 ರಿಂದ 11ರವರೆಗೆ 104 ಬಸ್‌ಗಳಲ್ಲಿ ಅಂದಾಜು 4ಸಾವಿರ ಪ್ರಯಾಣಿಕರಿಗೆ ಉಚಿತವಾಗಿ ಇಂಗ್ಲಿಷ್ ದಿನಪತ್ರಿಕೆ ನೀಡಲಿದ್ದೇವೆ’ ಎಂದು ಕೆಎಸ್ ಆರ್ಟಿ ಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


