ರಾಜ್ಯ

ಬೆಳಗಾವಿ: ಹಾಡಹಗಲೇ ಅರಣ್ಯಾಧಿಕಾರಿ ಪತ್ನಿ ಕಗ್ಗೊಲೆ

ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಆನಂದ ಮೋರಪ್ಪನವರ ಅವರ ಪತ್ನಿ ಭಾರ್ಗವಿ (58) ಅವರನ್ನು ಮನೆಯಲ್ಲೇ ಬುಧವಾರ ...

ಬೆಳಗಾವಿ: ಹಾಡಹಗಲೇ ಅರಣ್ಯಾಧಿಕಾರಿ ಪತ್ನಿ ಕಗ್ಗೊಲೆ
ಕೊಲೆಯಾದ ಭಾರ್ಗವಿ ಮತ್ತು ಅವರ ಮನೆ
Published On :
ಬೆಳಗಾವಿ: ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಆನಂದ ಮೋರಪ್ಪನವರ ಅವರ ಪತ್ನಿ ಭಾರ್ಗವಿ (58) ಅವರನ್ನು ಮನೆಯಲ್ಲೇ ಬುಧವಾರ ಹತ್ಯೆ ಮಾಡಲಾಗಿದೆ.
ಟಿಳಕವಾಡಿಯ ದ್ವಾರಕಾ ನಗರದ ಎಂ.ಜಿ. ರಸ್ತೆಯಲ್ಲಿರುವ ಮನೆಯಲ್ಲಿ ಭಾರ್ಗವಿ ಅವರ ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಸಾಯಿಸಲಾಗಿದೆ.  ಆನಂದ ಅವರು ಮಧ್ಯಾಹ್ನದ ಊಟಕ್ಕೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಲಗುವ ಕೋಣೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಎಲ್ಲಿಯೂ ಗಾಯಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಯಾವುದೇ ವಸ್ತುಗಳು ಚೆಲ್ಲಾಪಿಲ್ಲಿಯಾಗಿಲ್ಲ. ಅಲ್ಮೇರಾದಲ್ಲಿದ್ದ ಹಣ, ಒಡವೆ ಹಾಗೆಯೇ ಇವೆ. ಮೇಲ್ನೋಟಕ್ಕೆ ಇದು ಹಣಕ್ಕಾಗಿ ಮಾಡಿದ ಕೊಲೆ ಎಂದು ಅನಿಸುತ್ತಿಲ್ಲ. ಪರಿಚಯದವರೇ ಹತ್ಯೆ ಮಾಡಿರುವ ಶಂಕೆ ಇದೆ ಎಂದು ಡಿ.ಸಿ.ಪಿ ಅಮರನಾಥ ರೆಡ್ಡಿ ಹೇಳಿದ್ದಾರೆ.
ಭಾರ್ಗವಿ ಅವರು ಬೆಳಿಗ್ಗೆ ವೈದ್ಯಕೀಯ ತಪಾಸಣೆಗೆ ಹೋಗಿದ್ದರು. ನಂತರ ಅವರನ್ನು ಕಾರು ಚಾಲಕ ಮನೆಗೆ ಬಿಟ್ಟಿದ್ದರು. ಮಧ್ಯಾಹ್ನದ ವೇಳೆ ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿ, ತೆರೆದ ಬಾಗಿಲಿನಿಂದ ಒಳಗೆ ಬಂದು ಹತ್ಯೆ ಮಾಡಿರಬಹುದು ಎಂದು  ಶಂಕಿಸಿದ್ದಾರೆ.
ಈ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ. ವೈದ್ಯೆಯಾಗಿರುವ ಹಿರಿಯ ಪುತ್ರಿ ಕೃತಿಕಾ ಅವರ ಮದುವೆ ಎರಡು ವಾರಗಳ ಹಿಂದೆ ನಡೆದಿತ್ತು. ಅವರೀಗ ಪತಿಯ ಜೊತೆ ಬೆಂಗಳೂರಿನಲ್ಲಿ ವಾಸವಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.