ರಾಜ್ಯ

ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ರೌಡಿ ನಾಗನಿಂದ ಮತ್ತೊಂದು 'ಸಿಡಿ' ಬಾಂಬ್

ಮಾಜಿ ಕಾರ್ಪೋರೇಟರ್ ಹಾಗೂ ರೌಡಿನಾಗ ಅಲಿಯಾಸಿ ವಿ ನಾಗರಾಜ್ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಎರಡನೇ ಸಿಡಿ ಕಳುಹಿಸಿದ್ದಾನೆ. ಇದು ಸಹಜವಾಗಿಯೇ ..

ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ರೌಡಿ ನಾಗನಿಂದ ಮತ್ತೊಂದು 'ಸಿಡಿ' ಬಾಂಬ್
ರೌಡಿ ನಾಗ
Published On :
ಬೆಂಗಳೂರು: ಮಾಜಿ ಕಾರ್ಪೋರೇಟರ್ ಹಾಗೂ ರೌಡಿನಾಗ ಅಲಿಯಾಸಿ ವಿ ನಾಗರಾಜ್ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಎರಡನೇ ಸಿಡಿ ಕಳುಹಿಸಿದ್ದಾನೆ. ಇದು ಸಹಜವಾಗಿಯೇ ಪೊಲೀಸ್ ಇಲಾಖೆಯನ್ನು ಮುಜುಗರಕ್ಕೊಳಪಡಿಸಿದೆ.
ನನ್ನನ್ನು ರಕ್ಷಿಸುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಭರವಸೆ ನೀಡಿದರೇ ಕೂಡಲೇ ಪೊಲೀಸರಿಗೆ ಶರಣಾಗುವುದಾಗಿ ಆತ ಸಿಡಿಯಲ್ಲಿ ಹೇಳಿದ್ದಾನೆ. ಆತ ಕಳುಹಿಸಿದ್ಧ ಮೊದಲ ಸಿಡಿ ನೋಡಿದ್ದ ಜಿ. ಪರಮೇಶ್ವರ್ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿದ್ದರು.  ಗೃಹ ಸಚಿವರು ಜಂಟಲ್ ಮ್ಯಾನ್ ಎಂದು ನಾಗ ಹಾಡಿ ಹೊಗಳಿದ್ದಾನೆ.
ನನ್ನಿಂದ ಹಣ ಬದಲಾಯಿಸಿಕೊಡಲು ಸಾಧ್ಯವಾಗದ ಕಾರಣ ನಿರಾಶೆಗೊಂಡ ಕೆಲ ಐಪಿಎಸ್ ಅಧಿಕಾರಿಗಳು ನನ್ನ ವಿರುದ್ದ ಇಲ್ಲ ಸಲ್ಲದ ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾನೆ.
ಹೆಣ್ಣೂರು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರುಪ ಸೇರಿದಂತೆ ಇಲಾಖೆಯ ಹಲವು ಮಂದಿ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ, ಮಾಧ್ಯಮದ ಮೂಲಕ ನನ್ನ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ನನ್ನ ವಿರುದ್ಧ 50ಕ್ಕಬ ಹೆಚ್ಚು ದೂರುಗಳನ್ನು  ದಾಖಲಿಸಲಾಗಿದೆ, ಒಂದು ವೇಳೆ ನಾನು ಶರಣಾದರೇ ನ್ಯಾಯಾಲಯಕ್ಕೇ ಹಾಜರು ಪಡಿಸುವ ಮುನ್ನವೇ ನನ್ನನ್ನು ಕೊಲ್ಲುತ್ತಾರೆ ಎಂದು ಆತ ಸಿಡಿಯಲ್ಲಿ ವಿವರಿಸಿದ್ದಾನೆ.
ನನ್ನ ಪ್ರಕರಣವನ್ನು ಸಿಐಡಿ ಅಥವಾ ಸಿಬಿಐ ಗೆ ವಹಿಸುವಂತೆ ಹೈಕೋರ್ಟ್ ಗೆ ಮನವಿ ಸಲ್ಲಿಸಲು ಚಿಂತನೆ ನಡೆಸುತ್ತಿದ್ದೇನೆ ಎಂದು ಹೇಳಿರುವ ಆತ, ನಾನು ವಿಧಾನಸೌಧದ ಮುಂದೆ ಬಂದು ಸಾಯುತ್ತೇನೆ, ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು  ಇತ್ತೀಚೆಗೆ ಕಳುಹಿಸಿರುವ ಎರಡನೇ ಸಿಡಿಯಲ್ಲಿ ತಿಳಿಸಿದ್ದಾನೆ. ನಾನು ಹಾಗೂ ಸಂಸದ ಪಿಸಿ ಮೋಹನ್ ಒಳ್ಳೆಯ ಸ್ನೇಹಿತರು, ಇದಕ್ಕೆ ಸಾಕ್ಷ್ಯ ಬೇಕಾದರೇ ಅವರ ಫೋನ್ ಡಿಟೈಲ್ಸ್ ತೆಗೆಸಿ ನೋಡಿ ಎಂದು ಸವಾಲು ಹಾಕಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.