ಬೆಳಗಾವಿ: ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಮನೆ ಬೆಂಕಿಗೆ ಆಹುತಿಯಾದದ್ದರಿಂದ ಮನನೊಂದು ಮಧ್ಯ ವಯಸ್ಸಿನ ರೈತ ಕೀಟನಾಶಕ ಸೇವಿಸಿ...

Published On :
ಬೆಳಗಾವಿ: ಮನೆ ಬೆಂಕಿಗೆ ಆಹುತಿಯಾದದ್ದರಿಂದ ಮನನೊಂದು ಮಧ್ಯ ವಯಸ್ಸಿನ ರೈತ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ರಾತ್ರಿ ಸವದತ್ತಿ ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿದೆ.
ಈರಪ್ಪ ರಾಮಚಂದ್ರ ಕಂಬಾರ್(55 ವರ್ಷ) ಬಳಿ ಮೂರು ಎಕರೆ ಜಮೀನು ಇತ್ತು. ಕೃಷಿ ಮಾಡಲು 2 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಬರಗಾಲದಿಂದಾಗಿ ಬೆಳೆ ಕೂಡ ನಷ್ಟವಾಗಿದ್ದರಿಂದ ಕಂಬಾರ್ ಖಿನ್ನತೆಗೆ ಒಳಗಾಗಿದ್ದರು. ಕಳೆದ ವಾರ ಬೆಂಕಿಗೆ ಅವರ ಮನೆ ಕೂಡ ಸುಟ್ಟು ಹೋಗಿತ್ತು.
ಸಾಲ ಹಿಂತಿರುಗಿಸುವಂತೆ ಬ್ಯಾಂಕ್ ಮತ್ತು ಸ್ಥಳೀಯ ಹಣಕಾಸು ಸಂಸ್ಥೆಗಳ ಸಿಬ್ಬಂದಿ ಕಂಬಾರ್ ಅವರಿಗೆ ತೀವ್ರ ಒತ್ತಡ ತರುತ್ತಿದ್ದರು. ಈ ಬಗ್ಗೆ ಕೇಸು ಕೂಡ ದಾಖಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


