ಹಾಸನ: ಕಲ್ಲುಕ್ವಾರಿಯಲ್ಲಿ ಸಿಡಿಲು ಬಡಿದು ಸಿಡಿಮದ್ದು ಸ್ಫೋಟ; ಮೂವರ ಸಾವು
ಕಲ್ಲುಕ್ವಾರಿಯೊಂದರಲ್ಲಿ ಸಿಡಿಲು ಬಡಿದು ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ತಂದೆ, ಮಗ ಸೇರಿದಂತೆ ಮೂವರು ಮೃತಪಟ್ಟ ....

Published On :
ಹಾಸನ: ಕಲ್ಲುಕ್ವಾರಿಯೊಂದರಲ್ಲಿ ಸಿಡಿಲು ಬಡಿದು ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ತಂದೆ, ಮಗ ಸೇರಿದಂತೆ ಮೂವರು ಮೃತಪಟ್ಟ ದಾರುಣ ಘಟನೆ ಹಾಸನ ತಾಲ್ಲೂಕಿನ ಕಟ್ಟಾಯ ಬಳಿ ಸೋಮವಾರ ತಡ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ ಸಿಡಿಲಿನ ರಭಸಕ್ಕೆ ಕಲ್ಲು ಕ್ವಾರಿಯಲ್ಲಿ ಬಂಡೆ ಸ್ಫೋಟಿಸಲು ಇಡಲಾಗಿದ್ದ ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ಕಾರ್ಮಿಕರಾದ ಜಗದೀಶ(50) ಮತ್ತು ಅವರ ಪುತ್ರ ಪುನೀತ್(23) ಹಾಗೂ ಮತ್ತೊಬ್ಬ ಕಾರ್ಮಿಕ ನಾಗ(40) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಫೋಟಕ ಒಮ್ಮೆಲೆ ಸಿಡಿದ ಪರಿಣಾಮವಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸಿಡಿಲು ಬಂಡೆಯಲ್ಲಿ ಇಟ್ಟ ಸ್ಫೋಟಕ ಸಾಮಗ್ರಿಗೆ ಬಡಿದಿದ್ದೇ ಅವಘಡಕ್ಕೆ ಕಾರಣವೆಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


