ಬರದ ನಡುವೆ ಕರೆಂಟ್ 'ಶಾಕ್": ಇಂದಿನಿಂದ ವಿದ್ಯುತ್ ದರದಲ್ಲಿ ಏರಿಕೆ
: ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ನಂತರ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿ ಜನರಿಗೆ ಶಾಕ್ ನೀಡಲು ಮುಂದಾಗಿದೆ. ಇಂದಿನಿಂದ ಅಂದರೇ ಏಪ್ರಿಲ್ 1...

ಬೆಂಗಳೂರು: ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ನಂತರ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿ ಜನರಿಗೆ ಶಾಕ್ ನೀಡಲು ಮುಂದಾಗಿದೆ. ಇಂದಿನಿಂದ ಅಂದರೇ ಏಪ್ರಿಲ್ 1 ರಿಂದ ವಿದ್ಯುತ್ ದರದಲ್ಲಿ ಏರಿಕೆಯಾಗಲಿದೆ ಎಂದು ಕೆಇಆರ್ ಸಿ ಅಧ್ಯಕ್ಷ ಎಂ.ಕೆ ಶಂಕರಲಿಂಗೇಗೌಡ ಹೇಳಿದ್ದಾರೆ.
ಪ್ರತಿ ಯೂನಿಟ್ ಗೆ ಎಷ್ಟು ಏರಿಕೆಯಾಗಲಿದೆ ಎಂಬುದನ್ನು ಇನ್ನೂ ಪ್ರಕಟಿಸಿಲ್ಲ. ಬೆಸ್ಕಾಂ ಹೊರತು ಪಡಿಸಿ ಎಲ್ಲಾ ಎಸ್ಕಾಂಗಳಿಂದ ಡಾಟಾ ಸಂಗ್ರಹಿಸಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಐದು ದಿನಗಳೊಳಗೆ ದರ ನಿಗದಿ ಪಡಿಸುವುದಾಗಿ ಹೇಳಿದೆ.
ಬರ ಪರಿಸ್ಥಿತಿ ಹಾಗೂ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಪ್ರತಿ ಯೂನಿಟ್ ಗೆ 1.48 ಪೈಸೆ ಬೆಲೆ ಏರಿಸಬೇಕೆಂದು ಎಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ.
2012-13 ರಲ್ಲಿ ಎಸ್ಕಾಂ 73 ಪೈಸೆ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿತ್ತು, ಆದರೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಕೇವಲ 13 ಪೈಸೆ ಮಾತ್ರ ಏರಿಕೆ ಮಾಡಿತ್ತು. 2013-14, ಮತ್ತು 2016-17 ರಲ್ಲಿ 1.02 ಪೈಸೆ ಏರಿಕೆಗೆ ಶಿಫಾರಸು ಮಾಲಾಗಿತ್ತು, ಆದರೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ 80 ಪೈಸೆ ಏರಿಕೆ ಮಾಡಿತ್ತು ಎಂದು ಅವರು ಹೇಳಿದ್ದಾರೆ.
ಕಳೆದ ಫೆಬ್ರವರಿಯಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಪ್ರತಿದಿನ 280 ಮೆಗಾ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ಎಲ್ಲಿಯೂ ಪವರ್ ಕಟ್ ಸಮಸ್ಯೆ ಕೇಳಿ ಬರುತ್ತಿಲ್ಲ ಎಂದು ಕೆಪಿಸಿಎಲ್ ಎಂಡಿ ಕುಮಾರ್ ನಾಯಕ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


