ವಾಯುವಜ್ರ ಬಸ್ ಪ್ರಯಾಣ ದರಕ್ಕಿಂತ ಕ್ಯಾಬ್ ಗಳದ್ದೇ ಅಗ್ಗ!
ವಾಯುವಜ್ರ ಬಸ್ ಪ್ರಯಾಣ ದರಕ್ಕಿಂತ ಕ್ಯಾಬ್ ಗಳ ಪ್ರಯಾಣ ದರವೇ ಅಗ್ಗವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ವಾಯುವಜ್ರದಲ್ಲಿ ಪ್ರಯಾಣ ಮಾಡಬೇಕೆಂದರೆ ಒಬ್ಬರ ಟಿಕೆಟ್ ದರ 300 ರೂಪಾಯಿ. ಆದರೆ

Published On :
ಬೆಂಗಳೂರು: ವಾಯುವಜ್ರ ಬಸ್ ಪ್ರಯಾಣ ದರಕ್ಕಿಂತ ಕ್ಯಾಬ್ ಗಳ ಪ್ರಯಾಣ ದರವೇ ಅಗ್ಗವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ವಾಯುವಜ್ರದಲ್ಲಿ ಪ್ರಯಾಣ ಮಾಡಬೇಕೆಂದರೆ ಒಬ್ಬರ ಟಿಕೆಟ್ ದರ 300 ರೂಪಾಯಿ. ಆದರೆ ಕ್ಯಾಬ್ ಗಳಲ್ಲಿ ಇದಕ್ಕಿಂತ ಅಗ್ಗದ ದರದಲ್ಲಿ ಪ್ರಯಾಣಿಸಬಹುದಾಗಿದೆ.
ನವದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪೋಷಕರೊಂದಿಗೆ ಬಂದಿಳಿದ ಸಂತೋಷ್ ಕುಮಾರ್ ಎಂಬುವವರು ಎಲೆಕ್ಟ್ರಾನಿಕ್ ಸಿಟಿಗೆ ತೆರಳಬೇಕಿರುತ್ತದೆ. ಆದರೆ ಟಿಕೆಟ್ ದರ ಒಬ್ಬರಿಗೆ 300 ರೂಪಾಯಿಯಾಗಿರುತ್ತದೆ. ಆದರೆ ಕ್ಯಾಬ್ ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ತೆರಳಲು ಖರ್ಚಾಗುವ ಮೊತ್ತ 800 ರೂಪಾಯಿ ತಗುಲುತ್ತದೆ.
3 ಜನರಿಗೆ 900 ರೂಪಾಯಿ ಖರ್ಚು ಮಾಡಿ ವಾಯುವಜ್ರ ಬಸ್ ನಲ್ಲಿ ತೆರಳಿದರೂ ಸಹ ಲಗೇಜ್ ಗಳನ್ನಿರಿಸಲು ಪ್ರತ್ಯೇಕವಾದ ಸ್ಥಳವಿರುವುದಿಲ್ಲ. ಒಬ್ಬರೇ ಹೋಗದೇ ಜೊತೆಯಲ್ಲಿ ಕೆಲವು ಜನರಿದ್ದರೆ ವಾಯುವಜ್ರಕ್ಕಿಂತ ಕ್ಯಾಬ್ ಗಳಲ್ಲಿ ಸಂಚರಿಸುವುದೇ ಉತ್ತಮ ಎಂದು ಸಂತೋಷ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ವಾಯುವಜ್ರ, ವೋಲ್ವೊ ಬಸ್ ಗಳಲ್ಲಿ ಅತಿ ಹೆಚ್ಚು ಪ್ರಯಾಣ ದರ ಇರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯೂ ಕುಸಿಯುತ್ತಿದ್ದು, ಟ್ಯಾಕ್ಸಿ, ಕ್ಯಾಬ್ ಗಳಿಗೆ ಪೈಪೋಟಿ ನೀಡಲು ಬಿಎಂಟಿಸಿ ಸಹ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡಬೇಕೆಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿ ಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


