2020 ರ ವೇಳೆಗೆ ನದಿ ಮರಳು ಗಣಿಗಾರಿಕೆ ಸಂಪೂರ್ಣ ಬಂದ್?
ಮರಳು ಮಾಫಿಯಾವನ್ನು ಮಟ್ಟ ಹಾಕಲು ಹೊರಟಿರುವ ರಾಜ್ಯ ಸರ್ಕಾರ ಮುಂಬರುವ ವರ್ಷಗಳಲ್ಲಿ ಸಂಪೂರ್ಣವಾಗಿ ನದಿ ಮರಳು ಗಣಿಗಾರಿಕೆ ನಿಷೇಧಿಸಲು ..

ಬೆಂಗಳೂರು: ಮರಳು ಮಾಫಿಯಾವನ್ನು ಮಟ್ಟ ಹಾಕಲು ಹೊರಟಿರುವ ರಾಜ್ಯ ಸರ್ಕಾರ ಮುಂಬರುವ ವರ್ಷಗಳಲ್ಲಿ ಸಂಪೂರ್ಣವಾಗಿ ನದಿ ಮರಳು ಗಣಿಗಾರಿಕೆ ನಿಷೇಧಿಸಲು ಮುಂದಾಗಿದೆ.
ಕಳೆದ 20 ವರ್ಷಗಳಲ್ಲಿ ನಿರ್ಮಾಣಕ್ಕಾಗಿ ಮರಳಿನ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಇದು ಮರಳು ಮಾಫಿಯಾ ಎಗ್ಗಿಲ್ಲದೇ ಆರಂಭವಾಗಲು ಕಾರಣವಾಯಿತು. ಆರಂಭಿಕ ಕ್ರಮ ಕೈಗೊಂಡಿರುವ ಸರ್ಕಾರ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆ ವಿರುದ್ಧ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಮರಳುಗಣಿಗಾರಿಕೆಯಲ್ಲಿ ಪಾಲ್ಗೊಂಡವರ ವಿರುದ್ಧ ಕೇಸುಗಳನ್ನು ದಾಖಲಿಸಲಾಗುತ್ತಿದೆ.
ಕಳೆದ ಮೂರು ವರ್ಷಗಳಿಂದ ಪ್ರತಿದಿನ 7 ರಿಂದ 8 ಕೇಸುಗಳು ದಾಕಲಾಗುತ್ತಿವೆ. 2015-15 ರವ ವರೆಗೂ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆ ವಿರುದ್ಧ ಸುಮಾರು 8,668 ಕೇಸುಗಳು ದಾಖಲಾಗಿವೆ.
ಜೊತೆಗೆ 4,187.88 ಲಕ್ಷ ದಂಡ ಸಂಗ್ರಹವಾಗಿದೆ. ದಂಡ ವಿಧಿಸುವುದರಿಂದ ರಿಯಲ್ ಎಸ್ಟೇಟ್ ಮತ್ತು ಮರಳು ಮಾಫಿಯಾ ದಂಧೆ ಕೊನಗೊಳ್ಳುವುದಿಲ್ಲ, ಇದಕ್ಕೆ ಸಂಪೂರ್ಣವಾಗಿ ಅಂತ್ಯ ಹಾಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿರಾರು ವರ್ಷಗಳ ಹಿಂದಿನಿಂದಲೂ ನದಿ ದಡದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಲೇ ಬಂದಿದೆ. ಮರಳು ಗಣಿಗಾರಿಕೆಯಿಂದಾಗಿ ಜೀವ ವೈವಿದ್ಯತೆ ನಾಶವಾಗಿದೆ. ನದಿ ತೀರದ ಮರಳು ಗಣಿಗಾರಿಕೆ ನಿಷೇಧಕ್ಕಾಗಿ ಮುಂದಾಗಿರುವ ಸರ್ಕಾರ, ಮುಂದಿನ ಎರಡು ವರ್ಷಗಳಲ್ಲಿ ಮರಳು ಉತ್ಪಾದನೆಗಾಗಿ ಪ್ರೋತ್ಸಾಹ ನೀಡಲು ಸರ್ಕಾರ ಯೋಜನೆ ರೂಪಿಸುತ್ತಿದೆ.
1 ಟನ್ ಮರಳಿಗೆ ಅದರ ಗುಣಮಟ್ಟದ ಆಧಾರದ ಮೇಲೆ 600 ರು ಯಿಂದ 2.000 ರು ಇರುತ್ತದೆ. ನಾವೇ ಮರಳು ಉತ್ಪಾದಗನೆ ಮಾಡಿದರೇ ಅದರ ಬೆಲೆ ಕಡಿಮೆಯಾಗುತ್ತದೆ. ಎರಡು ಮರಳಿನ ಗುಣಮಟ್ಟ ಒಂದೇ ರೀತಿಯಾಗಿರುತ್ತದೆ ಎಂದು ಭಾರತೀಯ ಗುಣಮಟ್ಟ ಸಮಿತಿ ತಿಳಿಸಿದೆ.
ಪ್ರತಿ ತಿಂಗಳು ನಿರ್ಮಾಣಕ್ಕಾಗಿ 5 ಸಾವಿರ ಟ್ರಕ್ ಮರಳು ಬೇಕಾಗುತ್ತದೆ ಪ್ರತಿ ಟ್ರಕ್ ನಲ್ಲಿ 8 ರಿಂದ 10 ಟನ್ ಮರಳು ಇರುತ್ತದೆ. ಆದರೆ ಸ್ವಾಭಾವಿಕವಾಗಿ ಸಿಗುವ ಮರಳಿನ ಪ್ರಮಾಣ ಲಭ್ಯವಾಗುತ್ತಿಲ್ಲ. ಹೀಗಾಗಿ ಬೆಲೆ ಕೂಡ ಹೆಚ್ಚುತ್ತಿದೆ ಎಂದು ರಿಯಲ್ ಎಸ್ಟೇಟ್ ಡೆವಲಪರ್ಸ್ ಒಕ್ಕೂಟದ ಕಾರ್ಯದರ್ಶಿ ಎಸ್. ಸುರೇಶ್ ಹರಿ ಹೇಳಿದ್ದಾರೆ.
ಗುಣಮಟ್ಟದಲ್ಲಿ ಎಂ- ಮರಳು ಉತ್ತಮವಾಗಿದೆ, ಆದರೆ ಕಟ್ಟಡಗ ಹೊರಗಿನ ಪ್ಲಾಸ್ಟರಿಂಗ್ ಗೆ ಸೂಕ್ತವಲ್ಲ, ಇದಕ್ಕಾಗಿ ನಾವು ಸಮುದ್ರದ ಮರಳನ್ನು ಉಪಯೋಗಿಸಲು ಚಿಂತಿಸುತ್ತಿದ್ದೇವೆ, ಆದರೆ ಅದರಲ್ಲಿ ಉಪ್ಪಿನ ಅಂಶ ಹೆಚ್ಚು ಇರುವುದರಿಂದ ಕಟ್ಟಡ ನಿರ್ಮಾಣಕ್ಕೆ ಯೋಗ್ಯವಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


