ತೀವ್ರ ಬರದ ನಡುವೆಯೂ ಎಂಎಲ್ ಸಿಗಳಿಗಾಗಿ 13 ಹೊಸ ಕಾರು ಖರೀದಿಸಿದ ರಾಜ್ಯ ಸರ್ಕಾರ
ರಾಜ್ಯಾದ್ಯಂತ ತೀವ್ರ ಬರ ತಾಂಡವವಾಡುತ್ತಿದೆ. ಸತತ ಬರದಿಂದಾಗಿ ಜನ ಸಾಮಾನ್ಯರ ಬದುಕು ಜರ್ಜರಿತವಾಗುತ್ತಿದೆ. ಇಂಥ ಪರಿಸ್ಥಿತಿಯ ನಡುವೆಯೂ ರಾಜ್ಯ ..

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಬರ ತಾಂಡವವಾಡುತ್ತಿದೆ. ಸತತ ಬರದಿಂದಾಗಿ ಜನ ಸಾಮಾನ್ಯರ ಬದುಕು ಜರ್ಜರಿತವಾಗುತ್ತಿದೆ. ಇಂಥ ಪರಿಸ್ಥಿತಿಯ ನಡುವೆಯೂ ರಾಜ್ಯ ಸರ್ಕಾರ ಬರ ಪರಿಹಾರ ಕಾರ್ಯ ಕೈಗೊಳ್ಳುವುದನ್ನು ಬಿಟ್ಟು ವಿಧಾನ ಪರಿಷತ್ ಸದಸ್ಯರುಗಳಿಗಾಗಿ ಹೊಸ ಕಾರು ಖರೀದಿಸಿದೆ.
13 ಹೊಸ ಮಾರುತಿ ಸ್ವಿಫ್ಟ್ ಡಿಸೈರ್ ಕಾರುಗಳನ್ನು ಸರ್ಕಾರ 1.ಕೋಟಿ ರು ವೆಚ್ಚದಲ್ಲಿ ಖರೀದಿಸಿದೆ. ಈ ಕಾರುಗಳು ಶಾಸಕರ ಭವನದ ಆಡಳಿತದ ನಿಯಂತ್ರಣಕ್ಕೊಳಪಡುತ್ತವೆ.
ವಿಧಾನ ಪರಿಷತ್ ಸದಸ್ಯರು ಬೆಂಗಳೂರಿನಲ್ಲಿರುವಾಗ ಅವರು ಇದನ್ನು ಬಳಸಬಹುದಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ನಡುವೆಯೂ ಕಾರು ಖರೀದಿ ಅಗತ್ಯವಿತ್ತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ, 1 ಲಕ್ಷ ಕಿ ಮೀ ದೂರ ಪ್ರಯಾಣ ಮಾಡಿರುವ ಹಲವು ಹಳೇಯ ಕಾರುಗಳನ್ನು ಮಾರಾಟ ಮಾಡಲಾಗಿದೆ, ಸರ್ಕಾರದ ಮಾರ್ಗದರ್ಶನದ ಮೇಲೆ ಹಳೇಯ ಕಾರುಗಳ ಬದಲಿಗೆ ಹೊಸ ಕಾರುಗಳನ್ನು ಖರೀದಿಸಲಾಗಿದೆ, ಕೆಲವೊಂದು ಕಾರುಗಳು 2 ಲಕ್ಷ ಕಿಮೀ ಕ್ರಮಿಸಿದ್ದವು, ಈ ಕಾರುಗಳು ಪದೇ ಪದೇ ರಿಪೇರಿಗೆ ಬರುತ್ತಿದ್ದವು, ಅವುಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದರಿಂದ ಹೊಸ ಕಾರುಗಳನ್ನು ಖರೀದಿಸಲಾಗಿದೆ ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯರು ಈ ಕಾರುಗಳನ್ನು ಬೆಂಗಳೂರು ನಗರದೊಳಗೆ ಉಪಯೋಗಿಸಬಹುದಾಗಿದೆ. ಪ್ರತಿ ಕೀಮೀ ಗೆ 8 ರು. ದರ ವಿಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


