ಕುಡಿದು ವಾಹನ ಚಾಲನೆ: 21 ಸಾವಿರ ವಾಹನ ಚಾಲಕರ ಲೈಸೆನ್ಸ್ ಅಮಾನತು
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಆರೋಪದ ಮೇಲೆ ಕಳೆದ 2 ವರ್ಷಗಳಲ್ಲಿ ಸುಮಾರು 21,007 ಮಂದಿ ವಾಹನ ಚಾಲಕರ ಲೈಸೆನ್ಸ್ ಅನ್ನು ಅಮಾನತು...

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಆರೋಪದ ಮೇಲೆ ಕಳೆದ 2 ವರ್ಷಗಳಲ್ಲಿ ಸುಮಾರು 21,007 ಮಂದಿ ವಾಹನ ಚಾಲಕರ ಲೈಸೆನ್ಸ್ ಅನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು ನಗರ ಪೊಲೀಸರು ವಿವಿಧ ವಿಭಾಗಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಒಟ್ಟು 32,756 ಚಾಲಕರ ಲೈಸೆನ್ಸ್ ಅಮಾನತು ಮಾಡಿದ್ದಾರೆ ಎಂದು ನಗರ ಸಂಚಾರಿ ಪೊಲೀಸ್ ಹೆಚ್ಚುವರಿ ಆಯುಕ್ತ ಆರ್. ಹಿತೇಂದ್ರ ಹೇಳಿದ್ದಾರೆ. 2015 ಕ್ಕೆ ಹೋಲಿಸಿದರೇ 2017 ರಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಿವೆ. 14, 994 ರಿಂದ 17,762 ಕ್ಕೇರಿದೆ,
ಇನ್ನೂ ನಗರದಲ್ಲಿ ಅಪಘಾತ ಪ್ರಕರಣಗಳು ಕೂಡ ಹೆಚ್ಚಿವೆ. 2015 ರಲ್ಲಿ 4,828 ರಷ್ಟು ಇದ್ದದ್ದು 2016 ರಲ್ಲಿ 7,506ಕ್ಕೇರಿದೆ. ಸುಪ್ರೀಂ ಕೋರ್ಟ್ ಸಂಚಾರಿ ನಿಯಮ ಉಲ್ಲಂಘಿಸುವವರ ಲೈಸೆನ್ಸ್ ಗಳನ್ನು 3 ತಿಂಗಳ ಕಾಲ ಅಮಾನತುಗೊಳಿಸುವಂತೆ ಹೇಳಿದೆ. ಅಧಿಕ ವೇಗ, ಸಿಗ್ನಲ್ ಜಂಪ್, ಓವರ್ ಲೋಡಿಂಗ್, ಸರಕು ವಾಹನಗಳಲ್ಲಿ ಜನರ ಪ್ರಯಾಣ, ಮಧ್ಯ ಸೇವನೆ, ಮಾದಕ ವಸ್ತು ಸೇವನೆ ಮತ್ತು ಮೊಬೈಲ್ ಬಳಕೆ ಮಾಡಿ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಪದೇ ಪದೇ ಮದ್ಯಸೇವಿಸಿ ಚಾನೆ ಮಾಡುವವರ ಲೈಸೆನ್ಸ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಮಾನತುಗೊಳಿಸಲಾಗಿದೆ. ಒಂದು ಬಾರಿ ಲೈಸೆನ್ಸ್ ಅಮಾನತುಗೊಂಡರೇ ಆ ಚಾಲಕ ಯಾವುದೇ ವಾಹನವನ್ನು ಚಲಾಯಿಸುವಂತಿಲ್ಲ, ಆದರೆ ಲೈಸೆನ್ಸ್ ಅಮಾನತುಗೊಂಡವರು ರಾಜಾರೋಷವಾಗಿ ಮತ್ತೆ ವಾಹನ ಚಲಾಯಿಸುತ್ತಿದ್ದಾರೆ. ಲೈಸೆನ್ಸ್ ಕಳೆದು ಹೋಗಿದೆ ಎಂದು ನಕಲಿ ದೂರು ದಾಖಲಿಸುತ್ತಿದ್ದಾರೆ ಎಂದು ಸಂಚಾರಿ ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


