ಹಸ್ತ ಶಿಲ್ಪ ಮತ್ತು ಹೆರಿಟೇಜ್ ವಿಲೇಜ್ ನಿರ್ಮಾತೃ ವಿಜಯನಾಥ ಶೆಣೈ ನಿಧನ
ಹಸ್ತ ಶಿಲ್ಪ ಮತ್ತು ಹೆರಿಟೇಜ್ ವಿಲೇಜ್ ನಿರ್ಮಾತೃ ವಿಜಯನಾಥ್ ಶೆಣೈ (83) ಗುರುವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ವಿಜಯನಾಥ್ ಶೆಣೈ ಪತ್ನಿ, ಮಂಜುಳಾ, ...

ಮಣಿಪಾಲ: ಹಸ್ತ ಶಿಲ್ಪ ಮತ್ತು ಹೆರಿಟೇಜ್ ವಿಲೇಜ್ ನಿರ್ಮಾತೃ ವಿಜಯನಾಥ್ ಶೆಣೈ (83) ಗುರುವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ವಿಜಯನಾಥ್ ಶೆಣೈ ಪತ್ನಿ, ಮಂಜುಳಾ, ಪುತ್ರ ಶ್ರೀನಿವಾಸ್ ಮತ್ತು ಪುತ್ರಿ ಅನುರೂಪ ಅವರನ್ನು ಅಗಲಿದ್ದಾರೆ.
ಸಿಂಡಿಕೇಟ್ ಬ್ಯಾಂಕ್‍ನ ನಿವೃತ್ತ ಉದ್ಯೋಗಿಯಾಗಿದ್ದ ಅವರು ಹಸ್ತ ಶಿಲ್ಪ ಟ್ರಸ್ಟ್ ಆರಂಭಿಸಿದ್ದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತಮ್ಮ ಟ್ರಸ್ಟ್ ಮೂಲಕ ಮಣಿಪಾಲ್ ಹೆರಿಟೇಜ್ ನಿರ್ಮಾಣ ಮಾಡಿದ್ದರು.
ತಮ್ಮ ಬಿಡುವಿನ ವೇಳೆಯಲ್ಲಿ ಐತಿಹಾಸಿಕ ಪ್ರದೇಶಗಳನ್ನು ವೀಕ್ಷಿಸಿ, ಅಂತಹುದೇ ಮಾದರಿ ಶಿಲಾ ವಿನ್ಯಾಸವನ್ನು ಮಣಿಪಾಲ್ ಶೈಲಿಯಲ್ಲಿ ನಿರ್ಮಾಣ ಮಾಡಿದ್ದರು. ಇದಕ್ಕಾಗಿ 6 ಎಕರೆ ವಿಸ್ತೀರ್ಣದಲ್ಲಿ ಸುಂದರ ಹಾಗೂ ಭವ್ಯವಾದ ಹೆರಿಟೇಜ್‍ನ್ನು ನಿರ್ಮಾಣ ಮಾಡಿದ್ದರು.
ದೇಶದಲ್ಲಿ ಪಾರಂಪರಿಕ ಶೈಲಿಯ ಮನೆಗಳ ವಿನ್ಯಾಸಗಳು ಆಧುನಿಕ ಜಗತ್ತಿನಲ್ಲಿ ಕಣ್ಮರೆಯಾಗುವ ವೇಳೆಯಲ್ಲಿ ದೇಶಿ ಶೈಲಿಯ ಮನೆಗಳ ನಿರ್ಮಾಣ ಮಾಡಿ ಅವುಗಳ ಉಳಿವಿಗೆ ಕಾರಣವಾಗಿದ್ದರು. ವಿಜಯನಾಥ್ ಶೆಣೈ ಅವರ ಪರಿಶ್ರಮದ ಫಲವಾಗಿ ಮಣಿಪಾಲ್ ಹೆರಿಟೇಜ್‍ನಲ್ಲಿ 30 ಕ್ಕೂ ವಿವಿಧ ಬಗೆಯ ವಾಸ್ತು ಶೈಲಿಯನ್ನು ಕಾಣಬಹುದು.
ಕರಾವಳಿ ಹಾಗೂ ಉತ್ತರ ಕರ್ನಾಟಕದ ನೂರಾರು ವರ್ಷ ಹಳೆಯದಾದ ಕಟ್ಟಡಗಳನ್ನು ಹೆರಿಟೇಜ್ ವಿಲೇಜ್‌ಗೆ ಹಸ್ತಾಂತರಿಸಿ ಮರುನಿರ್ಮಾಣ ಮಾಡಿದ್ದರು. ಇದಕ್ಕಾಗಿ ಹಲವಾರು ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದರು. ಅವರ ಅಂತ್ಯಸಂಸ್ಕಾರ ಬೀಡಿನಗುಡ್ಡೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


