ರಾಜ್ಯ

ಆರ್ಡರ್ಲಿಗಳ ಸೇವೆ ಮುಂದುವರಿಕೆ: ಡಿಜಿ ಆರ್.ಕೆ ದತ್ತ ಸೇರಿ 40 ಐಪಿಎಸ್ ಗಳ ವಿರುದ್ಧ ದೂರು

ಆರ್ಡರ್ಲಿ ವ್ಯವಸ್ಥೆಯನ್ನು ರದ್ದುಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶವನ್ನು ಧಿಕ್ಕರಿಸಿರುವ ಸುಮಾರು 40 ಅಧಿಕಾರಿಗಳ ವಿರುದ್ಧ ವಿರುದ್ಧ ಕ್ರಮ ...

ಆರ್ಡರ್ಲಿಗಳ ಸೇವೆ ಮುಂದುವರಿಕೆ: ಡಿಜಿ ಆರ್.ಕೆ ದತ್ತ ಸೇರಿ 40 ಐಪಿಎಸ್ ಗಳ ವಿರುದ್ಧ ದೂರು
ಸಂಗ್ರಹ ಚಿತ್ರ
Published On :
ಬೆಂಗಳೂರು: ಆರ್ಡರ್ಲಿ ವ್ಯವಸ್ಥೆಯನ್ನು ರದ್ದುಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶವನ್ನು  ಧಿಕ್ಕರಿಸಿರುವ ಸುಮಾರು 40 ಅಧಿಕಾರಿಗಳ ವಿರುದ್ಧ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೋರಿ  ವಕೀಲರೊಬ್ಬರು ರಾಜ್ಯ ಪೊಲೀಸ್ ಪ್ರಾಧಿಕಾರಕ್ಕೆ ಮಂಗಳವಾರ ದೂರು ಕೊಟ್ಟಿದ್ದಾರೆ.
ಆರ್‌ಟಿಐನಿಂದ ಪಡೆದ ಮಾಹಿತಿ ಪ್ರಕಾರ ಆರ್‌.ಕೆ.ದತ್ತ ಅವರು ಐದು ಆರ್ಡರ್ಲಿಗಳನ್ನು ಹೊಂದಿದ್ದಾರೆ. ಅಂತೆಯೇ ಐಪಿಎಸ್ ಅಧಿಕಾರಿಗಳಾದ ಎಂ.ಎನ್.ರೆಡ್ಡಿ, ಸಂಜಯ್ ಸಹಾಯ್, ನೀಲಮಣಿ ರಾಜು, ಎಚ್‌.ಎನ್.ಸತ್ಯನಾರಾಯಣ ರಾವ್, ಮಾಲಿನಿ ಕೃಷ್ಣಮೂರ್ತಿ ಸೇರಿದಂತೆ 40 ಅಧಿಕಾರಿಗಳು ಕಾನ್‌ಸ್ಟೆಬಲ್‌ಗಳನ್ನು ತಮ್ಮ ಜೀತದಾಳುಗಳಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ವಕೀಲರಾದ ಸುಧಾ ಕಾಟವಾ ದೂರಿದ್ದಾರೆ. 
ಆರ್ಡರ್ಲಿ ವ್ಯವಸ್ಥೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಮಾರ್ಚ್ 8 2013 ರಂದು ರದ್ದುಗೊಳಿಸಿತ್ತು. ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷ ಹಾಗೂ ನಿವೃತ್ತ ನ್ಯಾಯಮೂರ್ತಿ ಎ.ಎಸ್.ಪಚ್ಚಾಪುರೆ ಅವರು ಕೆಲಸದ ನಿಮಿತ್ತ ಹೊರ ರಾಜ್ಯಕ್ಕೆ ಹೋಗಿದ್ದಾರೆ. ಹೀಗಾಗಿ ಪ್ರಾಧಿಕಾರದ ಸದಸ್ಯ ಎಂ.ಆರ್.ಕಾಂಬ್ಳೆ ಅವರಿಗೆ ದೂರನ್ನು ಕೊಟ್ಟಿದ್ದೇವೆ. ಅಧ್ಯಕ್ಷರು ನಗರಕ್ಕೆ ಮರಳಿದ ನಂತರ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ ಎಂದು ಸುಧಾ ಕಾಟವಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.