ರಾಜ್ಯ

ಬೆಂಗಳೂರು: ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿ ಕೆನ್ನೆಗೆ ಮುತ್ತು ಕೊಟ್ಟು ಅಪರಿಚಿತ ಯುವಕ ಪರಾರಿ

ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿ ಕೆನ್ನೆಗೆ ಮುತ್ತು ನೀಡಿದ ಯುವಕ ಪರಾರಿಯಾಗಿರುವ ಘಟನೆ ಜೀವನ್‌ಬಿಮಾನಗರದಲ್ಲಿ...

ಬೆಂಗಳೂರು: ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿ ಕೆನ್ನೆಗೆ ಮುತ್ತು ಕೊಟ್ಟು ಅಪರಿಚಿತ ಯುವಕ ಪರಾರಿ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು:  ಬಸ್  ನಿಲ್ದಾಣದಲ್ಲಿ ನಿಂತಿದ್ದ ಯುವತಿ ಕೆನ್ನೆಗೆ ಮುತ್ತು ನೀಡಿದ ಯುವಕ ಪರಾರಿಯಾಗಿರುವ ಘಟನೆ ಜೀವನ್‌ಬಿಮಾನಗರದಲ್ಲಿ ನಡೆದಿದೆ.
ಜೀವನ್‌ಬಿಮಾನಗರದ  ಮುಖ್ಯರಸ್ತೆಯಲ್ಲಿ ಯುವತಿಯ ಮೇಲೆ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. 
ಕೋರಮಂಗಲ ನಿವಾಸಿಯಾಗಿರುವ ಯುವತಿ ನಗರದ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಶನಿವಾರ ಸಂಜೆ ತಮ್ಮ ಸ್ನೇಹಿತರ ಜೊತೆ ಹೊರಗೆ ಹೋಗಿ  ಕ್ಯಾಬ್ ನಲ್ಲಿ ವಾಪಸ್ ಮನೆಗೆ ಬರುತ್ತಿದ್ದರು. 
ಈ ವೇಳೆ ಯುವತಿಯನ್ನು ಬಸ್ ನಿಲ್ದಾಣದಲ್ಲಿ ಇಳಿಸಲಾಯಿತು, ತನ್ನ ಮತ್ತೊಬ್ಬ ಸ್ನೇಹಿತನಿಗಾಗಿ ಯುವತಿ ಅಲ್ಲಿ ಕಾಯುತ್ತಿದ್ದಳು. ಈ ವೇಳೆ ಅಲ್ಲಿಗೆ ನಡೆದುಕೊಂಡು ಬಂದ ಯುವಕ ಆಕೆಯ ಕೆನ್ನೆಗೆ ಮುತ್ತುಕೊಟ್ಟಿದ್ದಾನೆ, ಆತನನ್ನು ಹಿಡಿಯಲು ಯತ್ನಿಸಲಾಯಿತಾದರೂ ಆತ ತಪ್ಪಿಸಿಕೊಂಡು ಓಡಿಹೋಗಿದ್ದಾನೆ.
ಘಟನೆ ನಡೆದ ಪ್ರದೇಶದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿಲ್ಲ  ಎಂದು ಹೇಳಿರುವ ಪೊಲೀಸರು, ಆಕೆಯ ಸ್ನೇಹಿತ ದೂರು ಕೊಟ್ಟಿದ್ದು, ಅದರನ್ವಯ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.