ರಾಜ್ಯ

ವಿಜಯಪುರ: ಪೋಲಿಸ್ ಠಾಣೆಯಲ್ಲಿ ಗುಂಡು ಪಾರ್ಟಿ; ಎಎಸ್ಐ, ಇಬ್ಬರು ಪೇದೆಗಳ ಅಮಾನತು

ಪೊಲೀಸ್ ಠಾಣೆ ಆವರಣದಲ್ಲಿಯೇ‌‌ ಪೊಲೀಸರು ಬಹಿರಂಗವಾಗಿ ಮದ್ಯ ಸೇವಿಸಿದ ಘಟನೆ ವಿಜಯಪುರದ ಜಲನಗರ ಠಾಣೆಯಲ್ಲಿ ನಡೆದಿದ್ದು,...

ವಿಜಯಪುರ: ಪೋಲಿಸ್ ಠಾಣೆಯಲ್ಲಿ ಗುಂಡು ಪಾರ್ಟಿ; ಎಎಸ್ಐ, ಇಬ್ಬರು ಪೇದೆಗಳ ಅಮಾನತು
ಎಎಸ್ ಐ ಮಾಳೆಗಾಂವ್
Published On :
ವಿಜಯಪುರ: ಪೊಲೀಸ್ ಠಾಣೆ ಆವರಣದಲ್ಲಿಯೇ‌‌ ಪೊಲೀಸರು ಬಹಿರಂಗವಾಗಿ ಮದ್ಯ ಸೇವಿಸಿದ ಘಟನೆ ವಿಜಯಪುರದ ಜಲನಗರ ಠಾಣೆಯಲ್ಲಿ ನಡೆದಿದ್ದು, ಈ ಸಂಬಂಧ ಎಎಸ್ಐ ಹಾಗೂ ಇಬ್ಬರು ಪೊಲೀಸ್ ಪೇದೆಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪೊಲೀಸ್ ಠಾಣೆಯ ಆವರಣದಲ್ಲಿಯೇ ಪೊಲೀಸರು ಮದ್ಯ ಸೇವಿಸುತ್ತಿರುವ ಫೋಟೊ ಮತ್ತು ವಿಡಿಯೋವನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತೆ ಮಾಡಿದೆ.
ಗುಂಡು ಪಾರ್ಟಿ ನಡೆಸಿದ್ದ ಎಎಸ್ಐ ಮಾಳೆಗಾಂವ್, ಪೇದೆ ಪ್ರಕಾಶ್ ಸೊಡ್ಡಿ ಹಾಗೂ ಅವರಿದೆ ಮದ್ಯ ಸರಬರಾಜು ಮಾಡಿದ ಮಹಿಳಾ ಪೊಲೀಸ್ ಪೇದೆ ಪದ್ಮಾವತಿ ರಾಠೋಡ್ ಅವರನ್ನು ಅಮಾನತುಗೊಳಿಸಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಜೈನ್ ಅವರು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಪೊಲೀಸರು ಮದ್ಯಸೇವಿಸಿರುವ ಬಗ್ಗೆ ಇನ್ನು ದೃಢಪಟ್ಟಿಲ್ಲ, ಈ ಬಗ್ಗೆ ಮತ್ತಷ್ಟು ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮೇ 14ರಂದು ಈ ಘಟನೆ ನಡೆದಿದ್ದು, ಈ ಗುಂಡುಪಾರ್ಟಿಯ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿ ಠಾಣೆಗೆ ಭೇಟಿ ನೀಡಿ ತರಾಟೆಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಮೊದಲಿಗೆ ಅವರು ಮದ್ಯ ಸೇವಿಸಿಲ್ಲ, ಸಾಂಬಾರ್ ಸೇವಿಸಿದ್ದು ಎಂದು ಸ್ಪಷ್ಟನೆ ಕೊಟ್ಟಿದ್ದರು. ಆದರೆ ಘಟನೆಗೆ ಸಂಬಂಧಿಸಿದಂತೆ ಕೆಲವು ಸಂಘಟನೆಗಳು ಠಾಣೆ ಮುಂಭಾಗದಲ್ಲಿ ತೀವ್ರ ಪ್ರತಿಭಟನೆ ನಡೆಸಲು ಶುರು ಮಾಡಿದ್ದವು. ಹೀಗಾಗಿ ಮೂವರನ್ನು ಅಮಾನತುಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.