ರಾಜ್ಯ

ಬಿಜೆಪಿ ನಾಯಕನ ಹತ್ಯೆ ರಾಜಕೀಯ ಕಾರಣದ ಹತ್ಯೆಯಲ್ಲ: ನಗರ ಪೊಲೀಸ್

ಮೇ. 31 ರಂದು ನಗರದ ಹೊರ ಭಾಗದಲ್ಲಿ ನಡೆದಿದ್ದ ಬಿಜೆಪಿ ನಾಯಕನ ಹತ್ಯೆಯ ಪ್ರಮುಖ ಆರೋಪಿಯನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ವಿಚಾರಣೆ ನಡೆಸಿದ್ದು, ರಾಜಕೀಯ ಕಾರಣಗಳಿಗಾಗಿ ನಡೆದ...

ಬಿಜೆಪಿ ನಾಯಕನ ಹತ್ಯೆ ರಾಜಕೀಯ ಕಾರಣದ ಹತ್ಯೆಯಲ್ಲ: ನಗರ ಪೊಲೀಸ್
ಹತ್ಯೆಗೀಡಾದ ಬಿಜೆಪಿ ನಾಯಕ
Published On :
ಬೆಂಗಳೂರು: ಮೇ. 31 ರಂದು ನಗರದ ಹೊರ ಭಾಗದಲ್ಲಿ ನಡೆದಿದ್ದ ಬಿಜೆಪಿ ನಾಯಕನ ಹತ್ಯೆಯ ಪ್ರಮುಖ ಆರೋಪಿಯನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ವಿಚಾರಣೆ ನಡೆಸಿದ್ದು, ರಾಜಕೀಯ ಕಾರಣಗಳಿಗಾಗಿ ನಡೆದ ಹತ್ಯೆಯಲ್ಲ ಎಂಬುದನ್ನು ಆರೋಪಿ ಹೇಳಿದ್ದಾನೆ. 
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆರೋಪಿ ವಿವಾದವೊಂದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕನನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಮೇ.31 ರಂದು ಸೂರ್ಯನಗರದಲ್ಲಿ ಬಿಜೆಪಿ ಎಸ್ ಸಿ, ಎಸ್ ಟಿ ಮೋರ್ಚಾದ ಉಪಾಧಿಯಕ್ಷ ಹರೀಶ್(40) ನ್ನು ಹತ್ಯೆ ಮಾಡಲಾಗಿತ್ತು. 
ಬಂಧಿತ ಪ್ರಮುಖ ಆರೋಪಿ ರಾಜು ಹಿರಿಯ ಪೊಲೀಸ್ ಅಧಿಕಾರಿಯ ಮೇಲೂ ದಾಳಿ ನಡೆಸಿದ್ದು, ಹಿರಿಯ ಪೊಲೀಸ್ ಅಧಿಕಾರಿ ಗುಂಡು ಹಾರಿಸಿದ ಪರಿಣಾಮ ರಾಜುಗೆ ಗಾಯಗಳಾಗಿವೆ. ಹತ್ಯೆಯ ಬೆನ್ನಲ್ಲೇ ರಾಜು, ಸಂದೀಪ್, ಕಾರ್ತಿಕ್, ಸಂತೋಷ್ ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು. ಆನೇಕಲ್ ಬಳಿಯಿರುವ ಕೆರೆಯಲ್ಲಿ ಮೀನುಗಾರಿಕೆ ನಡೆಸದಂತೆ ರಾಜು ತನ್ನನ್ನು ತಡೆದಿದ್ದರು ಇದನ್ನು ಪ್ರಶ್ನಿಸಿದ್ದಕ್ಕೆ ರಾಜು ಸಹೋದರರನ್ನು ಹರೀಶ್ ನಿಂದಿಸಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರಾಜು ತಮ್ಮ ಸಹೋದರರೊಟ್ಟಿಗೆ ಸೇರಿ ಹರೀಶ್ ಹತ್ಯೆಗೆ ಸಂಚು ರೂಪಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.