ರಾಜ್ಯ

ವೀರಶೈವ-ಲಿಂಗಾಯತ ಒಂದೇ ಅಲ್ಲ: ಉಲ್ಟಾ ಹೊಡೆದ ಸಚಿವ ಎಂ.ಬಿ ಪಾಟೀಲ್

ವೀರಶೈವ-ಲಿಂಗಯತ ಸಮುದಾಯಕ್ಕೆ ಸ್ವತಂತ್ರ್ಯ ಧರ್ಮದ ಸ್ಥಾನಮಾನ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಒಡುಕು ಉಂಟಾಗುತ್ತಿದೆ. ಜಲ ಸಂಪನ್ಮೂಲ ...

ವೀರಶೈವ-ಲಿಂಗಾಯತ ಒಂದೇ ಅಲ್ಲ: ಉಲ್ಟಾ ಹೊಡೆದ ಸಚಿವ ಎಂ.ಬಿ ಪಾಟೀಲ್
ಎಂ.ಬಿ. ಪಾಟೀಲ್
Published On :
ಬೆಂಗಳೂರು: ವೀರಶೈವ-ಲಿಂಗಯತ ಸಮುದಾಯಕ್ಕೆ ಸ್ವತಂತ್ರ್ಯ ಧರ್ಮದ ಸ್ಥಾನಮಾನ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಒಡುಕು ಉಂಟಾಗುತ್ತಿದೆ. ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಈ ಮೊದಲು ತಳೆದಿದ್ದ ನಿಲುವು ಬದಲಾಯಿಸಿ ಉಲ್ಟಾ ಹೊಡೆದಿದ್ದಾರೆ.
2013ರ ಜುಲೈ 31 ರಂದು ಆಗಿನ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಮನವಿ ಸಲ್ಲಿಸಲಾಗಿತ್ತು. ಆ ಮನವಿಗೆ ನಾನು ಸಹಿ ಹಾಕಿದ್ದು ತಪ್ಪು ಎಂದು ನನಗೆ ಮನವರಿಕೆಯಾಗಿದೆ. ಹೀಗಾಗಿ ನಾನು ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ. 
ಲಿಂಗಾಯತ ಒಂದು ಸ್ವತಂತ್ರ್ಯ ಅಸ್ಥಿತ್ವವುಳ್ಳ ಧರ್ಮ, ಬಸವಣ್ಣ ಈ ಧರ್ಮದ ಸಂಸ್ಥಾಪಕರು, ವೀರಶೈವ ಮತ್ತು ಲಿಂಗಾಯತದಲ್ಲಿ ಪ್ರತ್ಯೇಕತೆಗಳಿವೆ. ಹಾಗಾಗಿ ಲಿಂಗಾಯತ, ವೀರಶೈವ ಎರಡೂ ಸಮುದಾಯದ ಮಠಾಧೀಶರು ಮುಖಂಡರು ಒಟ್ಟುಗೂಡಿ ಸಭೆ ನಡೆಸಿ ಒಮ್ಮತದ ಅಭಿಪ್ರಾಯಕ್ಕೆ ಬರಬೇಕು, ಲಿಂಗಾಯತ ಸ್ವತಂತ್ರ್ಯ ಧರ್ಮದ ಬೇಡಿಕೆಗೆ ಒತ್ತಾಯಿಸಬೇಕು ಎಂದು ಪಾಟೀಲ್ ಅಖಿಲ ಭಾರತ ವೀರಶೈವ ಮಹಾಸಭಾಗೆ ಪತ್ರ ಬರೆದಿದ್ದಾರೆ. 
800 ವರ್ಷಗಳ ಹಿಂದೆ ಸಮಾಜ ಸುಧಾರಕ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದರು. ಅದು ವೀರಶೈವ ಧರ್ಮಕ್ಕಿಂತ ವಿಭಿನ್ನವಾಗಿದೆ. ವೀರಶೈವರ ಹಲವು ಸಂಪ್ರದಾಯಗಳು ಹಿಂದೂ ಧರ್ಮದ  ಶೈವರನ್ನು ಹೋಲುತ್ತವೆ. ಲಿಂಗಾಯತ ಧರ್ಮ ವಿಶಿಷ್ಟ ಸಮುದಾಯವಾಗಿದೆ, ಲಿಂಗಾಯತ ಧರ್ಮ ಹಿಂದೂ ಧರ್ಮದ ಹಲವು ಮೂಡನಂಬಿಕೆ ಆಚರಣೆಗಳನ್ನು ದೂರ ವಿಟ್ಟಿದೆ ಎಂದು ಹೇಳಿದ್ದಾರೆ.
ಮಹಾಸಭಾ ನಿಲುವಿನಲ್ಲಿ ಬದಲಾವಣೆಯಿಲ್ಲ
ಸಚಿವ ಎಂಬಿ ಪಾಟೀಲ್ ನಿಲುವು ಬದಲಾವಣೆ ಸಂಬಂಧ ಪ್ರತಿಕ್ರಯಿಸಿರುವ ಅಖಿಲ ಭಾರತ ವೀರಶೈವ-ಲಿಂಗಾಯತ ಸಮುದಾಯ ಮಹಸಭಾ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಜೊತೆಗೆ ಪಾಟೀಲ್ ಹೇಳಿಕೆಯನ್ನು ವಿರೋಧಿಸಿದ್ದಾರೆ. 
ಆಗಸ್ಟ್ 2ರಂದು ವೀರಶೈವ ಮಹಸಭಾ ಸಭೆ ಕರೆದಿದ್ದು, ವಿವಿಧ ಮಠಗಳ ಮಠಾಧೀಶರು, ವಿಧ್ವಾಂಸರು ಹಾಗೂ ಮುಖಂಡರು ಭಾಗವಹಿಸಿ ವಿಸ್ತೃತ ಚರ್ಚೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.