ಶಿವಮೊಗ್ಗ: ಮೊರಾರ್ಜಿ ದೇಸಾಯಿ ವಸತಿನಿಲಯದಲ್ಲಿ ಊಟ ಸೇವಿಸಿದ 24 ಮಕ್ಕಳು ಅಸ್ವಸ್ಥ
ಗಾಜನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಊಟ ಸೇವಿಸಿದ 24 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ...

Published On :
ಶಿವಮೊಗ್ಗ: ಗಾಜನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಊಟ ಸೇವಿಸಿದ 24 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ಊಟ ಮಾಡಿದ ಮಕ್ಕಳು ರಾತ್ರಿ ಗಂಟೆಗೆ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಅಸ್ವಸ್ಥಗೊಂಡ ಮಕ್ಕಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಾಹಾರ ಸೇವನೆಯಿಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ವಸತಿ ನಿಲಯದಲ್ಲಿ 300 ವಿದ್ಯಾರ್ಥಿಗಳಿದ್ದಾರೆ, ಅದರಲ್ಲಿ 5,6, ಮತ್ತು 7 ನೇತರಗತಿಯ 24 ಮಕ್ಕಳು ಮಾತ್ರ ಅಸ್ವಸ್ಥಗೊಂಡಿದ್ದಾರೆ. ಈ ಮಕ್ಕಳು ಅವರ ಪೋಷಕರು ತಂದು ಕೊಟ್ಟಿದ್ದ ಆಹಾರ ಸೇವಿಸಿದ್ದೇ ಕಾರಣ ಎಂದು ಶಾಲೆಯ ಪ್ರಿನ್ಸಿಪಾಲ್ ಕೆ. ಆರ್ ನಾಯಕ್ ಆರೋಪಿಸಿದ್ದಾರೆ.
ಮಕ್ಕಳಿಗೆ ಕೇವಲ ಬಿಸ್ಕಟ್ಸ್ ಮಾತ್ರ ತಂದು ಕೊಟ್ಟಿದ್ದೆವು ಎಂದು ಮಕ್ಕಳ ಪೋಷಕರು ಹೇಳಿದ್ದಾರೆ. ಮಕ್ಕಳು ಅಸ್ವಸ್ಥಗೊಂಡಿರುವ ಬಗ್ಗೆ ಶಾಲೆಯ ಪ್ರಾಂಶುಪಾಲರು ನಮಗೆ ಮಾಹಿತಿ ನೀಡಲಿಲ್ಲ, ಟಿವಿ ಚಾನೆಲ್ ಗಳಲ್ಲಿ ವರದಿ ಪ್ರಸಾರವಾದ ನಂತರ ಬೆಳಗ್ಗೆ 11 ಗಂಟೆಗೆ ನಾವು ಆಸ್ಪತ್ರೆಗೆ ಬಂದೆವು ಎಂದು ಪೋಷಕಪು ದೂರಿದ್ದಾರೆ.
ಸಂಜೆ 4 ಗಂಟೆಯಲ್ಲಿ ಗೀ ರೈಸ್ ತಿಂದ ಮೇಲೆ ವಾಕರಿಕೆ ಬರುವಂತಾಯಿತು.ರಾತ್ರಿ ಊಟವಾದ ಮೇಲೂ ಹಲವರಿಗೆ ವಾಂತಿಯಾಗಿದೆ ಎಂದು ಕೆಲ ವಿದ್ಯಾರ್ಥಿಗಳು ಹೇಳಿದ್ದಾರೆ.
ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿದರು. ವಸತಿ ನಿಲಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯತೆ ಕಂಡು ಬಂದರೆ ಶಿಸ್ತು ಕ್ರಮ ಕೈಗೊಂಡು ಇಲಾಖಾ ತನಿಖೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.ಅಡುಗೆಗೆ ಬಳಸಿದ ಎಣ್ಣೆ ಮತ್ತು ನೀರಿನ ಗುಣ ಮಟ್ಟ ಪರೀಕ್ಷೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಊಟಅಸ್ವಸ್ಥdinnerಶಿವಮೊಗ್ಗShivamoggaillMorarji Desai residential School24 studentsಮೊರಾರ್ಜಿ ದೇಸಾಯಿ ವಸತಿ ನಿಲಯ24 ವಿದ್ಯಾರ್ಥಿಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


