ರಾಜ್ಯ

ಮೈಸೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಶಾಯಿ ಬದಲಿಗೆ ಮಾರ್ಕರ್‌ ಪೆನ್‌ ಬಳಕೆ

ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಳಿಸಲಾಗದ ಶಾಯಿ ಬದಲಿಗೆ ಮಾರ್ಕರ್‌ ಪೆನ್‌ ಬಳಸುವ ಸಂಬಂಧ ರಾಜ್ಯ ಚುನಾವಣಾ ಆಯೋಗ ...

ಮೈಸೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ  ಶಾಯಿ ಬದಲಿಗೆ ಮಾರ್ಕರ್‌ ಪೆನ್‌ ಬಳಕೆ
ಮೈಸೂರು ಪೇಂಟ್ಸ್‌ ಅಂಡ್‌ ವಾರ್ನಿಷ್‌ ಲಿಮಿಟೆಡ್‌ಗೆ ಭೇಟಿ ನೀಡಿದ ಚುನಾವಣಾ ಆಯುಕ್ತ ಟಿ.ಎಸ್ ಶ್ರೀನಿವಾಸಾಚಾರಿ
Published On :
ಮೈಸೂರು: ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಳಿಸಲಾಗದ ಶಾಯಿ ಬದಲಿಗೆ ಮಾರ್ಕರ್‌ ಪೆನ್‌ ಬಳಸುವ ಸಂಬಂಧ ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಿದೆ. 
ಮೈಸೂರು ಪೇಂಟ್ಸ್‌ ಅಂಡ್‌ ವಾರ್ನಿಷ್‌ ಲಿಮಿಟೆಡ್‌ಗೆ ಭೇಟಿ ನೀಡಿದ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್ ಶ್ರೀನಿವಾಸಾಚಾರಿ  ಸಾಧಕ–ಬಾಧಕಗಳನ್ನು ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಪಾಲಿಕೆಗಳಿಗೆ 2018ರಲ್ಲಿ ಚುನಾವಣೆ ನಡೆಯಲಿದೆ. ಮತದಾರರ ಬೆರಳಿಗೆ ಶಾಯಿ ಬದಲಿಗೆ ಪೆನ್‌ ಬಳಕೆ ಮಾಡುವ ಚಿಂತನೆ ಇದೆ. ಇದರ ತಯಾರಿಕೆ, ಗುಣಮಟ್ಟ ಹಾಗೂ ದರ ವ್ಯತ್ಯಾಸದ ಕುರಿತು ಚರ್ಚಿಸಲು ಬಂದಿದ್ದೇನೆ’ ಎಂದು ಹೇಳಿದರು.
ಅಳಿಸಲಾಗದ ಮಾರ್ಕರ್‌ ಪೆನ್ನೊಂದನ್ನು ಸಾವಿರ ಮತದಾರರಿಗೆ ಬಳಕೆ ಮಾಡಲು ಸಾಧ್ಯವಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮತದಾನ ಪ್ರಮಾಣ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಇದಕ್ಕೆ ಅನುಗುಣವಾಗಿ ಪೆನ್‌ಗಳ ಅಗತ್ಯವಿದೆ. ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈಗಾಗಲೇ ಇದು ಬಳಕೆಯಾಗಿದೆ’ ಎಂದರು.
ಮೈಸೂರು ಪೇಂಟ್ಸ್‌ ಅಂಡ್‌ ವಾರ್ನಿಷ್‌ ಲಿಮಿಟೆಡ್‌ ಕಂಪನಿ ಎಚ್.ಎ ವೆಂಕಟೇಶ್, ರಾಷ್ಟ್ರಪತಿ ಚುನಾವಣೆ ವೇಳೆ ಬಳಸಿದ ಪೆನ್ 37.45. ರು ಆಗಿತ್ತು. ಆದರೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ  ಪ್ರತಿ ಬೂತ್ ನಲ್ಲಿ  ಸುಮಾರು 1,500 ಮತದಾರರಿರುತ್ತಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.