ರಾಜ್ಯ

ತಡವಾಗಿ ಬಂದ ಆ್ಯಂಬುಲೆನ್ಸ್: ತುಮಕೂರಿನಲ್ಲಿ 8 ವರ್ಷದ ಬಾಲಕ ಸಾವು

ಆ್ಯಂಬುಲೆನ್ಸ್ ಬರುವುದು ತಡವಾದ ಕಾರಣ ಕಾಯಿಲೆಯಿಂದ ಬಳಲುತ್ತಿದ್ದ 8 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಪಾವಗಡದಲ್ಲಿ...

ತಡವಾಗಿ ಬಂದ ಆ್ಯಂಬುಲೆನ್ಸ್:  ತುಮಕೂರಿನಲ್ಲಿ 8 ವರ್ಷದ ಬಾಲಕ ಸಾವು
ಸಾಂದರ್ಭಿಕ ಚಿತ್ರ
Published On :
ತುಮಕೂರು: ಆ್ಯಂಬುಲೆನ್ಸ್ ಬರುವುದು ತಡವಾದ ಕಾರಣ ಕಾಯಿಲೆಯಿಂದ ಬಳಲುತ್ತಿದ್ದ 8 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಪಾವಗಡದಲ್ಲಿ ನಡೆದಿದೆ.
8 ವರ್ಷದ ಶ್ರೀನಿಧಿ ಮೃತ ಬಾಲಕ. ವೆಂಕಟಸ್ವಾಮಿ-ಸುಗುಣಮ್ಮ ದಂಪತಿಯ ಮಗನಾದ ಶ್ರೀನಿಧಿ.
ಕಳೆದ ಮೂರ್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರು. ಈ ವೇಳೆ 108 ಸಿಬ್ಬಂದಿಗೆ ಮೃತ ಶ್ರೀನಿಧಿಯ ಪೋಷಕರು ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದರು. 
ಬಳಿಕ 2 ಗಂಟೆ ತಡವಾಗಿ ಬಾಲಕನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಆ ವೇಳೆಗಾಗಲೇ ಬಾಲಕನ ಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಅಲ್ಲಿಯ ವೈದ್ಯರು ಬಾಲಕನನ್ನು ಕೂಡಲೇ ಬೆಂಗಳೂರಿಗೆ ರವಾನಿಸುವಂತೆ ಹೇಳಿದ್ದರು. ಕೂಡಲೇ ಬಾಲಕನನ್ನ ಕರೆದುಕೊಂಡು ಹೋಗಿದ್ದಾರಾದರೂ ಬೆಂಗಳೂರು ತಲುಪುವ ಮೊದಲೇ ಮಾರ್ಗ ಮಧ್ಯದಲ್ಲಿ ಬಾಲಕ ಶ್ರೀನಿಧಿ ಕೊನೆಯುಸಿರೆಳೆದಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.