ಬೆಂಗಳೂರು: ಕೇಂದ್ರ ಕಾರಾಗೃಹದಲ್ಲಿ ಚಿನ್ನಮ್ಮನ ರಾಜ ದರ್ಬಾರ್
ಪರಪ್ಪನ ಅಗ್ರಹಾರದಲ್ಲಿರುವ ಜೈಲು ಅಧಿಕಾರಿಯ ಅಧಿಕೃತ ಕೊಠಡಿ ಎಐಎಡಿಎಂಕೆ ನಾಯಕಿ ಶಶಿಕಲಾ ನೋಡಲು ಬರುವ ವಿಸಿಟರ್ಸ್ ಗಳ ಅತಿಥಿ ...

Published On :
ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿರುವ ಜೈಲು ಅಧಿಕಾರಿಯ ಅಧಿಕೃತ ಕೊಠಡಿ ಎಐಎಡಿಎಂಕೆ ನಾಯಕಿ ಶಶಿಕಲಾ ನೋಡಲು ಬರುವ ವಿಸಿಟರ್ಸ್ ಗಳ ಅತಿಥಿ ಗೃಹವಾಗಿದೆ ಎಂದು ಉನ್ನತ ಮೂಲಗಳ ಮಾಹಿತಿಯಿಂದ ತಿಳಿದು ಬಂದಿದೆ.
ಈ ಕೊಠಡಿಯಲ್ಲಿ 8 ಕುರ್ಚಿಗಳಿದ್ದು, ಶಶಿಕಲಾ ಭೇಟಿ ಮಾಡಲು ಬರುವ ಉನ್ನತ ವ್ಯಕ್ತಿಗಳ ಮೀಟಿಂಗ್ ಹಾಲ್ ಆಗಿ ಪರಿವರ್ತಿತವಾಗಿದೆ. ಈ ಕೊಠಡಿಯನ್ನು ಬಳಸುತ್ತಿದ್ದ ಅಧಿಕಾರಿ ಇತ್ತೀಚೆಗೆ ನಿವೃತ್ತರಾದ ಹಿನ್ನೆಲೆಯಲ್ಲಿ, ಅದನ್ನು ಮೀಟಿಂಗ್ ಹಾಲ್ ಆಗಿ ಬದಲಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕೊಠಡಿಯಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ, ಜೊತೆಗೆ ಕೊಠಡಿ ಹೊರಗೆ ಭದ್ರತಾ ಸಿಬ್ಬಂದಿಯೂ ಇರುವುದಿಲ್ಲ, ಪ್ರತಿದಿನ ಶಶಿಕಲಾರನ್ನು ನೋಡಲು ಹಲವರು ಬರುತ್ತಾರೆ. ಅದರಲ್ಲಿ ತಮಿಳುನಾಡಿನ ಪ್ರಮುಖ ಸಚಿವರು ಹಾಗೂ ಗಣ್ಯ ರಾಜಕಾರಣಿಗಳು ಇರುತ್ತಾರೆ.
ಜೈಲಿನಲ್ಲಿರುವ ಕೈದಿಗಳನ್ನು ಭೇಟಿ ಮಾಡಲು ಬಂದಾಗ ಅಲ್ಲಿ ಒಂದು ಜಾಲರಿ(ಮೆಸ್) ಇರುತ್ತದೆ. ಕೈದಿಗಳು ಮತ್ತು ವಿಸಿಟರ್ಸ್ ಪರಸ್ಪರ ನೇರವಾಗಿ ಭೇಟಿಯಾಗಲು ಸಾಧ್ಯವಿಲ್ಲ, ಆದರೆ ಶಶಿಕಲಾ ಭೇಟಿ ಮಾಡಲು ವ್ಯವಸ್ಥೆಯಾಗಿರುವ ಕೊಠಡಿಯಲ್ಲಿ ಅಂತ ಸಮಸ್ಯೆಯಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
parappana agrahara jailSasikalaಶಸಿಕಲಾspecial treatmentವಿಶೇಷ ಆತಿಥ್ಯofficial’s chamberಪರಪ್ಪನ ಅಗ್ರಹಾರ ಜೈಲುಅಧಿಕಾರಿ ಕೊಠಡಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


