ಸಚಿವ ರೋಷನ್ ಬೇಗ್ ಸಹೋದರ ಡಾ. ರೆಹನ್ ಬೇಗ್ ನಿರ್ದೋಷಿ: ಹೈಕೋರ್ಟ್
ಕೋಟಿ ನಕಲಿ ಛಾಪಾಕಾಗದ ಹಗರಣ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿಗೆ ಮೊದಲ ಬಾರಿಗೆ ಛಾಪಾ ಕಾಗದ ಮಾರಾಟದ ಪರವಾನಗಿ ...

Published On :
ಬೆಂಗಳೂರು: ಬಹುಕೋಟಿ ನಕಲಿ ಛಾಪಾಕಾಗದ ಹಗರಣ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿಗೆ ಮೊದಲ ಬಾರಿಗೆ ಛಾಪಾ ಕಾಗದ ಮಾರಾಟದ ಪರವಾನಗಿ ಕೊಡಿಸಿದ ಆರೋಪ ಎದುರಿಸುತ್ತಿದ್ದ ಸಚಿವ ರೋಷನ್ ಬೇಗ್ ಸಹೋದರ ಡಾ. ರೆಹನಾ ಬೇಗ್ ಅವರನ್ನು ಹೈಕೋರ್ಟ್ ಖುಲಾಸೆ ಗೊಳಿಸಿದೆ.
ಡಾ. ರೆಹನಾ ಬೇಗ್ ಅವರನ್ನು ಖುಲಾಸೆ ಗೊಳಿಸಿ ಅಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಪ್ರಕರಣದಲ್ಲಿ ರೆಹಾನ್ ಬೇಗ್ ವಿರುದ್ಧ ಗುರುತಿಸಿದ್ದ 60 ಸಾಕ್ಷಿಗಳು ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ರೆಹಾನ್ ಬೇಗ್ ಹಣಕಾಸಿನ ಲಾಭ ಪಡೆದಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದ ನ್ಯಾಯಪೀಠ ಅಧೀನ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿದೆ.
ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ರವಿ ಮಳಿಮಠ್ ಮತ್ತು ಜಾನ್ ಮೈಕೆಲ್ ಚುನಾ ಸಿಬಿಐ ಮೇಲ್ಮನವಿಯನ್ನು ವಜಾಗೊಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
High Courtಹೈಕೋರ್ಟ್brotherಸಹೋದರRoshan baigರೋಷನ್ ಬೇಗ್Dr Rehan Baigstamp paper scamಡಾ. ರೆಹಾನ್ ಬೇಗ್ಛಾಪಾ ಕಾಗದ ಹಗರಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


