ಕರ್ನಾಟಕ: ಹಿಂದಿ ಭಾಷೆ ಜೊತೆಗೆ ಇಂಗ್ಲೀಷ್ ಗೂ ಕನ್ನಡಪರ ಸಂಘಟನೆಗಳಿಂದ ವಿರೋಧ
ಹಿಂದಿ ಭಾಷೆಯ ಬಳಿಕ ಇದೀಗ ಇಂಗ್ಲೀಷ್ ಭಾಷೆ ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳಿಂದ...

Published On :
ಬೆಂಗಳೂರು: ಹಿಂದಿ ಭಾಷೆಯ ಬಳಿಕ ಇದೀಗ ಇಂಗ್ಲೀಷ್ ಭಾಷೆ ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆಯ ಕಾವು ಎದುರಿಸುತ್ತಿದೆ.
ಹಿಂದಿ ಭಾಷೆ ವಿರೋಧಿ ಪ್ರತಿಭಟನೆ ನಡೆಯುತ್ತಿರುವಾಗಲೇ ಕರ್ನಾಟಕ ರಕ್ಷಣಾ ವೇದಿಕೆ ಇಂದು ಬೆಂಗಳೂರಿನ ಇಕೊ ಟೆಕ್ ಪಾರ್ಕ್ ಹತ್ತಿರದ ಮಾಲ್ ವೊಂದರ ರೆಸ್ಟೊರೆಂಟ್ ನ ಸಂಕೇತ ಹಲಗೆಗಳು(sign board) ಹಿಂದಿ ಮತ್ತು ಇಂಗ್ಲೀಷ್ ಭಾಷೆಯನ್ನು ವಿರೂಪಗೊಳಿಸಿದ್ದಾರೆ.
#NammaMetroHindiBeda(Our Metro, Wo don't want Hindi) ಎಂಬ ಹಿಂದಿ ವಿರೋಧಿ ಟ್ವಿಟ್ಟರ್ ಅಭಿಯಾನದ ನಂತರ ಚಿಕ್ಕಪೇಟೆ ಮತ್ತು ಮೆಜೆಸ್ಟಿಕ್ ನ ಎರಡು ಸಹಿ ಬೋರ್ಡ್ ಗಳಲ್ಲಿ ಇದ್ದ ಹಿಂದಿ ಭಾಷೆಗಳನ್ನು ಮುಚ್ಚಿ ಮೊನ್ನೆ 3ರಂದು ಚಿತ್ರೀಕರಿಸಲಾಗಿತ್ತು.
ಈ ಮೆಟ್ರೊ ಸ್ಟೇಷನ್ ಗಳಲ್ಲಿ ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಸಂಕೇತ ಬೋರ್ಡ್ ಗಳು ಇವೆ.
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ರೆಸ್ಟೊರೆಂಟ್ ಗಳ ವಿರುದ್ಧ ಹಿಂದಿ ವಿರೋಧಿ ಮತ್ತು ಇಂಗ್ಲಿಷ್ ವಿರೋಧಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಅವರು ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಕೈಗಾರಿಕೆಗಳು, ವಾಣಿಜ್ಯ ಉದ್ಯಮಿಗಳು ಕರ್ನಾಟಕದ ಭೂಮಿಯನ್ನು, ವಿದ್ಯುತ್ ನ್ನು ಬಳಸುತ್ತಾರೆ. ಆದರೆ ಕನ್ನಡ ಭಾಷೆಯನ್ನು ಮತ್ತು ಕನ್ನಡಿಗರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಇಂಗ್ಲೀಷ್ ಅಥವಾ ಹಿಂದಿ ಭಾಷೆಯನ್ನು ಬಳಸಬೇಕೆಂದರೆ ದೆಹಲಿ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಕನ್ನಡ ಬಳಸಲಿ ಎಂದು ಕೂಡ ಕನ್ನಡಪರ ಚಳುವಳಿಗಾರರು ಹೇಳುತ್ತಾರೆ.
ರಾಜ್ಯ ಸರ್ಕಾರ ಈ ಟ್ವಿಟ್ಟರ್ ಅಭಿಯಾನದ ಜೊತೆ ಇರುವುದರಿಂದ ಈ ಭಾಷಾ ಬಳಕೆ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿ ವಿರೋಧಿ ಚಳವಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಹಿಂದಿಯೇತರ ಬೇರೆ ರಾಜ್ಯಗಳಲ್ಲಿ ಏನು ನಿಯಮ ಅನುಸರಿಸುತ್ತಿದ್ದಾರೆಂದು ಕಂಡುಹಿಡಿಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿಯವರ ಆದೇಶದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ ನೊಟೀಸ್ ಜಾರಿ ಮಾಡಿ ಅದು ಮೂರು ಭಾಷೆಯ ನೀತಿ ಏಕೆ ಅನುಸರಿಸುತ್ತಿದೆ ಎಂದು ವಿವರಿಸುವಂತೆ ಕೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Hindiಹಿಂದಿrestaurantಕನ್ನಡ ಪರ ಸಂಘಟನೆಗಳುಇಂಗ್ಲೀಷ್Metro stationರೆಸ್ಟೊರೆಂಟ್Pro kannada ActivistSignboardEngllishಮೆಟ್ರೊ ಸ್ಟೇಷನ್ಸಂಕೇತ ಬೋರ್ಡ್ ಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


