ರಾಜ್ಯ

ಪಠ್ಯಪುಸ್ತಕಗಳ ಪುನರ್ಬಳಕೆಯಿಂದ ಆರ್ಥಿಕವಾಗಿ ಹಿಂದುಳಿದವರ ಉನ್ನತ ಶಿಕ್ಷಣಕ್ಕೆ ನೆರವು

ಕಳೆದೊಂದು ದಶಕದಲ್ಲಿ ಭಾರತದಲ್ಲಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸಂಖ್ಯೆ ಶೇಕಡಾ...

ಪಠ್ಯಪುಸ್ತಕಗಳ ಪುನರ್ಬಳಕೆಯಿಂದ ಆರ್ಥಿಕವಾಗಿ ಹಿಂದುಳಿದವರ ಉನ್ನತ ಶಿಕ್ಷಣಕ್ಕೆ ನೆರವು
ಎನ್ ಜಿಒ ಆರಂಭಿಸಿದ ಗ್ರಂಥಾಲಯಕ್ಕೆ ಹಳೆ ಪಠ್ಯಪುಸ್ತಕಗಳನ್ನು ಪೂರೈಸಿದ ವಿದ್ಯಾರ್ಥಿಗಳು
Published On :
ಬೆಂಗಳೂರು: ಕಳೆದೊಂದು ದಶಕದಲ್ಲಿ ಭಾರತದಲ್ಲಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸಂಖ್ಯೆ ಶೇಕಡಾ 20ರಿಂದ 30ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೇಳುತ್ತಿದ್ದರೂ ಕೂಡ, 2014ರ ಸಮೀಕ್ಷೆ ಪ್ರಕಾರ ಶೇಕಡಾ 10ರಷ್ಟು ಮಂದಿಗೆ ಮಾತ್ರ ಉನ್ನತ ಶಿಕ್ಷಣ ಲಭಿಸುತ್ತಿದೆಯಷ್ಟೆ.
ಸಮೀಕ್ಷೆಯನ್ನು ಆರ್ಥಿಕ ತಜ್ಞರು, ಸಂಶೋಧಕರು ಮತ್ತು ಅಭಿವೃದ್ಧಿ ಯೋಜನೆಯಲ್ಲಿ ಸಂಶೋಧನೆ ಮತ್ತು ಚರ್ಚೆಗಳ ಕೇಂದ್ರ ಸಮೀಕ್ಷೆಯನ್ನು ನಡೆಸಿದೆ. ಈ ವಿಷಯದ ಬಗ್ಗೆ ಗಮನಹರಿಸಲು ಹೊಸದಾಗಿ ಆರಂಭಿಸಲಾಗಿರುವ ಸರ್ಕಾರೇತರ ಸಂಘಟನೆ ಎರಡು ವಾರಗಳ ಹಿಂದೆ ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಗ್ರಂಥಾಲಯದ ಉಚಿತ ಬಳಕೆಯನ್ನು ಆರಂಭಿಸಿದೆ.
ಭವಸಾರ ಅಕ್ಷಯ ಟ್ರಸ್ಟ್ ನ ಮೊದಲ ಅಭಿಯಾನ ಇದಾಗಿದ್ದು ಇದು ಕಾರ್ಯಾಚರಣೆಯನ್ನು ಕಳೆದ ಏಪ್ರಿಲ್ ನಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿಗಳ ಸಶಕ್ತೀಕರಣಕ್ಕೆ ಆರಂಭಿಸಿತ್ತು. ಎರಡೇ ವಾರಗಳಲ್ಲಿ ಪಠ್ಯಪುಸ್ತಕಗಳ ಅಭಿಯಾನದಲ್ಲಿ ಟ್ರಸ್ಟ್ ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಷಯಗಳ 100 ಕಾಲೇಜು ಪಠ್ಯಪುಸ್ತಕಗಳನ್ನು ಸಂಗ್ರಹಿಸಿತ್ತು. ಪಠ್ಯಪುಸ್ತಕಗಳು ಕಾಲೇಜು ವಿದ್ಯಾರ್ಥಿಗಳು ಈಗಾಗಲೇ ಬಳಸಿದ ಪುಸ್ತಕಗಳಾಗಿವೆ. ಟ್ರಸ್ಟ್ ನ ವೆಬ್ ಸೈಟ್ ಗೆ ಲಾಗ್ ಇನ್ ಆಗಿ ಪಠ್ಯಪುಸ್ತಕಗಳನ್ನು ಆನ್ ಲೈನ್ ಮೂಲಕ ಕೊಡುಗೆ ನೀಡಬಹುದು. ಮುಂದಿನ ಅಕ್ಟೋಬರ್ ವೇಳೆಗೆ ನಗರದ ಸುತ್ತ 5 ಕಡೆಗಳಲ್ಲಿ ಪಠ್ಯಪುಸ್ತಕಗಳ ಬ್ಯಾಂಕನ್ನು ಸ್ಥಾಪಿಸುವ ಉದ್ದೇಶವನ್ನು ಎನ್ ಜಿಒ ಹೊಂದಿದೆ. ಪ್ರಸ್ತುತ ಪುಸ್ತಕಗಳನ್ನು ಎನ್ ಜಿಒದ ಕೇಂದ್ರ ಕಚೇರಿಯಿರುವ ಕೆ. ನಾರಾಯಣಪುರ ಮುಖ್ಯ ರಸ್ತೆಯಲ್ಲಿ ಸಂಗ್ರಹಿಸಲಾಗುತ್ತಿದೆ.
ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಉಚಿತವಾಗಿ ಪಡೆಯಬಹುದು. ಉನ್ನತ ಶಿಕ್ಷಣಕ್ಕೆ ಪರದಾಡುವ ಅನೇಕ ವಿದ್ಯಾರ್ಥಿಗಳನ್ನು ನೋಡಿದ್ದೇನೆ. ಪಠ್ಯಪುಸ್ತಕಗಳನ್ನು ಮರು ಬಳಕೆ ಮಾಡಿದರೆ ಉತ್ತಮ. ಹೊಸ ಪುಸ್ತಕಗಳನ್ನು ಖರೀದಿಸಿ ಹಣ ಖರ್ಚು ಮಾಡುವ ಬದಲು ಇಲ್ಲಿ ಉಚಿತವಾಗಿ ನೀಡುತ್ತೇವೆ ಎನ್ನುತ್ತಾರೆ ಭವಸಾರ್ ಅಕ್ಷಯ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಮುರಳಿ ದತ್ತ್ ಪಿಎಸ್.
ವರ್ಷಕ್ಕೊಂದು ಬಾರಿ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡುವ ನಗರ ಮೂಲದ ಮತ್ತೊಂದು ಎನ್ ಜಿಒದಿಂದ ಸ್ಫೂರ್ತಿ ಪಡೆದು ಪಠ್ಯಪುಸ್ತಕಗಳನ್ನು ವಿತರಿಸುವ ಆಲೋಚನೆ ಬಂತು. ಉಚಿತ ಪಠ್ಯಪುಸ್ತಕ ನೀಡುವ ಬದಲು ವಿದ್ಯಾರ್ಥಿಗಳು ನೀಡಿದ ಹಳೆ ಪುಸ್ತಕಗಳನ್ನು ಮರುಬಳಕೆ ಯಾಕೆ ಮಾಡಬಾರದು ಎನ್ನಿಸಿತು ಎನ್ನುತ್ತಾರೆ ಮುರಳಿ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.