ಶಾಲೆಯಲ್ಲಿ ಮಕ್ಕಳಿಗೆ ಕಡ್ಡಾಯ ಮರು ಲಸಿಕೆ: ಪೋಷಕರ ವಿರೋಧ
ದಡಾರ ಮತ್ತು ಮಕ್ಕಳಿಗೆ ಬರುವ ರುಬೆಲ್ಲ ಖಾಯಿಲೆಗಳ ವಿರುದ್ಧ 9 ತಿಂಗಳಿನಿಂದ 15 ವರ್ಷದವರೆಗಿನ...

Published On :
ಬೆಂಗಳೂರು:ದಡಾರ ಮತ್ತು ಮಕ್ಕಳಿಗೆ ಬರುವ ರುಬೆಲ್ಲ ಖಾಯಿಲೆಗಳ ವಿರುದ್ಧ 9 ತಿಂಗಳಿನಿಂದ 15 ವರ್ಷದವರೆಗಿನ ಮಕ್ಕಳಿಗೆ ನೀಡುವ ಲಸಿಕೆ ಅಭಿಯಾನ ನಗರದ ಅನೇಕ ಪೋಷಕರಲ್ಲಿ ಭಯ, ಆತಂಕವನ್ನು ಸೃಷ್ಟಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಈ ಚುಚ್ಚುಮದ್ದುಗಳನ್ನು ಕಡ್ಡಾಯವಾಗಿ ನೀಡುವುದಕ್ಕೆ ಪೋಷಕರು ಬಲವಾಗಿ ವಿರೋಧಿಸಿದ್ದಾರೆ. ಕೆಲವು ಪೋಷಕರು ಶಾಲೆಗೆ ಪತ್ರ ಬರೆದು ತಮ್ಮ ಮಕ್ಕಳಿಗೆ ತಮ್ಮ ಒಪ್ಪಿಗೆಯಿಲ್ಲದೆ ಲಸಿಕೆಗಳನ್ನು ನೀಡಬೇಡಿ ಎಂದು ಹೇಳಿದ್ದಾರೆ.
ಪೋಷಕರ ಒತ್ತಡವನ್ನು ತಾಳಲಾರದೇ ಸಿಬಿಎಸ್ಇ ಶಾಲಾ ಒಕ್ಕೂಟ ಈಗಾಗಲೇ ಪೋಷಕರ ಒಪ್ಪಿಗೆಯಿಲ್ಲದೆ ಚುಚ್ಚುಮದ್ದನ್ನು ನೀಡುತ್ತಿಲ್ಲ.
''ಇದೊಂದು ದೊಡ್ಡ ವಿಷಯವಾಗಿದೆ. ಲಸಿಕೆ ಬಗ್ಗೆ ಅನೇಕ ಪೋಷಕರಿಗೆ ಒಪ್ಪಿಗೆಯಿಲ್ಲದಿರುವುದರಿಂದ ನಮಗೆ ಕೂಡ ಗೊಂದಲವಾಗಿದೆ. ಹಾಗಾಗಿ ನಾವು ಕೊನೆಯದಾಗಿ ನಮಗೆ ಪೋಷಕರಿಂದ ಒಪ್ಪಿಗೆ ಸಿಕ್ಕಿದರೆ ಮಕ್ಕಳ ಲಸಿಕೆಗಳನ್ನು ಮಾತ್ರ ನೀಡಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಮಂಡಳಿ ಸದಸ್ಯ ಮನ್ಸೂರ್ ಆಲಿ ಖಾನ್. ಎಲ್ಲಾ ಸಿಬಿಎಸ್ಇ ಶಾಲೆಗಳು ಈ ನಿಯಮವನ್ನು ಅನುಸರಿಸುತ್ತಿವೆ.
ಆದರೆ ರಾಜ್ಯ ಪಠ್ಯಕ್ರಮದ ಶಾಲೆಗಳು ಪೋಷಕರ ಮನವೊಲಿಸಿ ಲಸಿಕೆ ನೀಡಲು ಮುಂದಾಗಿವೆ.ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವ್ಯವಸ್ಥಾಪಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿ ಕುಮಾರ್ ಪ್ರತಿಕ್ರಿಯೆ ನೀಡಿ, ನಮಗೆ ಕೂಡ ಆರಂಭದಲ್ಲಿ ಸಂಶಯವಿತ್ತು. ಆದರೆ ನಂತರ ಆ ಚುಚ್ಚುಮದ್ದಿನ ಪ್ರಾಮುಖ್ಯತೆ ಬಗ್ಗೆ ಗೊತ್ತಾಯಿತು. ನಾವು ಸಾಧ್ಯವಾದಷ್ಟು ಪೋಷಕರ ಮನವೊಲಿಸಲು ಪ್ರಯತ್ನಿಸುತ್ತೇವೆ. ನಂತರವೂ ಪೋಷಕರು ಬೇಡವೆಂದರೆ ನಾವು ಒತ್ತಾಯ ಮಾಡುವುದಿಲ್ಲ ಎನ್ನುತ್ತಾರೆ.
ಈ ಕುರಿತು ಕೆಲವು ಪೋಷಕರು ಆನ್ ಲೈನ್ ನಲ್ಲಿ ಅಭಿಯಾನ ಕೈಗೊಂಡಿದ್ದಾರೆ. ನಾವು ವೈದ್ಯರು ತಿಳಿಸಿರುವಂತೆ ಎಲ್ಲಾ ಚುಚ್ಚುಮದ್ದುಗಳನ್ನು ಹಾಕಿಸಿರುತ್ತೇವೆ. ಹಾಗಿರುವಾಗ ಮತ್ತೆ ಶಾಲೆಯಲ್ಲಿ ಲಸಿಕೆ ನೀಡುವುದು ಏಕೆ ಎಂಬುದು ಪೋಷಕರು ಪ್ರಶ್ನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


