ಅಪ್ರಾಪ್ತ ಬಾಲಕಿಗೆ ಕಿರುಕುಳ ಆರೋಪ: ಬೆತ್ತಲಾಗಿಸಿ ದಲಿತ ಯುವಕನಿಗೆ ಥಳಿತ
ಅಪ್ರಾಪ್ತ ಬಾಲಕಿಯೊಬ್ಬಳಿಗೆ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ದಲಿತ ಯುವಕನೊಬ್ಬನನ್ನು ಕೂಡಿ ಹಾಕಿ, ಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯೊಂದು ಗುಬ್ಬಿಯ ಹೊರವಲಯದಲ್ಲಿ ನಡೆದಿದೆ...

ತುಮಕೂರು: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ದಲಿತ ಯುವಕನೊಬ್ಬನನ್ನು ಕೂಡಿ ಹಾಕಿ, ಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯೊಂದು ಗುಬ್ಬಿಯ ಹೊರವಲಯದಲ್ಲಿ ನಡೆದಿದೆ.
ಗುಬ್ಬಿಯ ಹೊರ ಭಾಗದ ತೋಟದ ಮನೆಯೊಂದರಲ್ಲಿ ಯುವಕನನ್ನು ಬೆತ್ತಲೆಗೊಳಿಸಿ, ಆತನಿಗೆ ಚಪ್ಪಲಿ ಹಾರ ಹಾಕಿ ಥಳಿಸಿರುವ ಈ ಘಟನೆಯ ವಿಡಿಯೋ ವಾಟ್ಸ್ ಆ್ಯಪ್ ನಲ್ಲಿ ಹರಿದಾಡಿದ ಹಿನ್ನಲೆಯಲ್ಲಿ ಖುದ್ದು ಹುಡುಗನ ಪೋಷಕರು ನಿನ್ನೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
10 ಮಂದಿಯ ತಂಡವೊಂದು ಯುವಕನಿಗೆ ಥಳಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಕಂಡುಬಂದಿತ್ತು. ಪ್ರಕರಣ ಸಂಬಂಧ 10ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪ್ರಕಾಶ್ ಅಲಿಯಾಸ್ ಕಡು ಪ್ರಕಾಶ್ ಆತನ ಜೊತೆಗಾರರಾದ ನಾಗರಾಜ್, ರಮೇಶ್, ರಂಗಪ್ಪ, ನಾರಾಯಣ, ಬ್ಯಾಟರಾಯಪ್ಪ ಎಂದು ಗುರ್ತಿಸಲಾಗಿದೆ. ಅಭಿಷೇಕ್ (20) ಅಪಹರಣಕ್ಕೊಳಗಾದ ಯುವಕನಾಗಿದ್ದಾನೆ.
ಬಾಲಕಿಗೆ ಕಿರುಕುಳ ನೀಡಿದ್ದಾನೆಂದು ಆರೋಪಿಸಿದ್ದ ಆರೋಪಿಗಳು ಯುವಕನನ್ನು ಕಾರಿನಲ್ಲಿ ಅಪಹರಿಸಿ ತೋಟದ ಮನೆಯೊಂದರಲ್ಲಿ ಕೂಡಿ ಹಾಕಿದ್ದಾರೆ. ನಂತರ ಆತನನ್ನು ಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಆತನಿಗೆ ಬಟ್ಟೆಯನ್ನು ನೀಡಿ ಗುಬ್ಬಿಯಿಂದ 13 ಕಿ.ಮೀ ದೂರದಲ್ಲಿರುವ ಮಲ್ಲಸಂದ್ರ ಗ್ರಾಮದ ಬಳಿ ಬಿಸಾಡಿ ಹೋಗಿದ್ದಾರೆ.
ಇನ್ನು ಈ ಕೃತ್ಯ ವಿಡಿಯೋವೊಂದು ವಾಟ್ಸ್ ಅಪ್ ನಲ್ಲಿ ಹರಿದಾಡ ತೊಡಗಿತ್ತು. ಈ ವಿಡಿಯೋ ದಲಿತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು ನಿನ್ನೆ ಗುಬ್ಬಿಯಲ್ಲಿರುವ ಪೊಲೀಸ್ ಠಾಣೆಗೆ ಮುತ್ತಿಗೆ ಹಾಗಿ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದವು.
ಇದರಂತೆ ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆ 506, 323, 340,324 ಮತ್ತು 504ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಸ್ತುತ ಆರೋಪಿಗಳು ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧನಕ್ಕೊಳಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ.
ಇನ್ನು ಥಳಿತಕ್ಕೊಳಗಾದ ಯುವಕ ಸರಕು ಸಾಗಾಣೆ ಮಾಡುವ ವಾಹನದ ಚಾಲಕನ ಮಗನಾಗಿದ್ದಾನೆ. ಬಾಲಕಿಯೊಬ್ಬಳ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡಿದ್ದ ಯುವಕ ಆಕೆಗೆ ಪ್ರತೀನಿತ್ಯ ಸಂದೇಶಗಳನ್ನು ಕಳುಹಿಸುತ್ತಿದ್ದ. ಈ ವಿಚಾರ ಬಾಲಕಿ ತಂದೆಯ ಗಮನಕ್ಕೆ ಬಂದಿತ್ತು. ಹೀಗಾಗಿ ಬಾಲಕಿಯ ತಂದೆ ಹಾಗೂ ಅವರ ಜೊತೆಗಾರರು ಯುವಕನಿಗೆ ಥಳಿಸಿದ್ದಾರೆಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


