ಮೈಸೂರಿನಲ್ಲಿ ಡಕಾಯಿತಿ: ಮಂಡ್ಯ ಮೂಲದ ಲೇಡಿ ಡಾನ್ ಬಂಧನ
ಯುವಕರ ಮೂಲಕ ನಗರದಲ್ಲಿ ಕಳ್ಳತನ ನಡೆಸುತ್ತಿದ್ದ ಮಂಡ್ಯದ ಲೇಡಿ ಡಾನ್ ಭಾಗ್ಯ ಮತ್ತು ಆಕೆಯ ಸಹಚರರನ್ನು ಬಂಧಿಸಿದ್ದಾರೆ. ...

ಮೈಸೂರು: ಡಿಸೆಂಬರ್ 22 ರಂದು ಮೈಸೂರಿನ ಕೊಪ್ಪಲೂರು ರಿಂಗ್ ರಸ್ತೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಯುವಕರ ಮೂಲಕ ನಗರದಲ್ಲಿ ಕಳ್ಳತನ ನಡೆಸುತ್ತಿದ್ದ ಮಂಡ್ಯದ ಲೇಡಿ ಡಾನ್ ಭಾಗ್ಯ ಮತ್ತು ಆಕೆಯ ಸಹಚರರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಡ್ಯ ಮೂಲದ ಭಾಗ್ಯ, ಮೈಸೂರು ಮೂಲದವರಾದ ಮಧುಸೂದನ್, ಶರತ್ ಕುಮಾರ್, ಕಾರ್ತಿಕ್.ಸಿ, ಅರ್ಜುನ್.ಸಿ, ಮಂಡ್ಯದ ಎಂ.ಡಿ.ರವಿಕುಮಾರ್, ಮೈಸೂರಿನವರಾದ ದರ್ಶನ್.ಎನ್, ಮಂಜುನಾಥ್, ಆರ್.ಸತೀಶ್, ಶ್ರೀರಂಗಪಟ್ಟಣದ ಬಿ.ಸಿ.ಸುನೀಲ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಮೂರುವರೆ ಲಕ್ಷ ನಗದು, 2 ಇನ್ನೋವಾ ಕಾರು, 12 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.ಡಿಸೆಂಬರ್ 22 ರಾತ್ರಿ 8 ಗಂಟೆಯಲ್ಲಿ ರಿಂಗ್ ರಸ್ತೆಯಲ್ಲಿ ದ್ವಾರಕೀಶ್ ಎಂಬುವರರನ್ನು ದರೋಡೆ ಮಾಡಿ ಅವರಿಂದ 16 ಲಕ್ಷ ಹಣವನ್ನು ದೋಚಲಾಗಿತ್ತು.
ಕಳ್ಳತನ ಎಸಗಿದ ಬಳಿಕ ಇವರೆಲ್ಲ ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಸಂಚರಿಸಿ ಸ್ವಲ್ಪ ಹಣವನ್ನು ಖರ್ಚು ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ತಿಳಿಸಿದ್ದಾರೆ.
ಕ್ಯಾತಮಾರನಹಳ್ಳಿಯವಳಾದ ಭಾಗ್ಯ ಮಂಡ್ಯದ ರೌಡಿಗಳ ಜೊತೆ ಸಂಪರ್ಕ ಇರಿಸಿಕೊಂಡಿದ್ದಳು. ಎರಡು ಮಕ್ಕಳ ತಾಯಿಯಾಗಿರುವ ಭಾಗ್ಯ ಗಂಡನಿಂದ ದೂರಾಗಿ ತನ್ನ ಪ್ರಿಯಕರನ ಜೊತೆ ವಾಸಿಸುತ್ತಿದ್ದಾಳೆ.
ಭಾಗ್ಯ, ಕೆಲವು ವರ್ಷಗಳ ಹಿಂದೆ ಕೊಲೆಯಾದ ರೌಡಿ ಶೀಟರ್ ಜಡೇಜಾ ರವಿ ಜೊತೆ ಸಂಪರ್ಕ ಇಟ್ಟು ಕೊಂಡಿದ್ದಳು. ಈಕೆಯ ತಾಯಿ ಬಡ್ಡಿ ಪಾಪಮ್ಮ ಕೆಲ ವರ್ಷಗಳ ಹಿಂದೆ ಹತ್ಯೆಯಾಗಿದ್ದಾಳೆ.
ಲೋನ್ ರಿಕವರಿ, ಬಾಡಿಗೆ ಮನೆ ತೆರವುಗೊಳಿಸಲು ಡೀಲ್ ತೆಗೆದುಕೊಳ್ಳುತ್ತಿದ್ದ ಭಾಗ್ಯ ಅವರಿಂದ ಭಾರೀ ಪ್ರಮಾಣದ ಕಮಿಷನ್ ಹಣ ಪಡೆಯುತ್ತಿದ್ದಳು. ಇತ್ತೀಚೆಗೆ ಪೊಲೀಸರು ಇವಳ ವ್ಯವಹಾರವನ್ನೆಲ್ಲಾ ಎಡೆಮುರಿ ಕಟ್ಟಿದ್ದರಿಂದ ಹಣಕ್ಕಾಗಿ ಡಕಾಯಿತಿ ನಡೆಸುತ್ತಿದ್ದಳು. ಮೈಸೂರಿನಲ್ಲಿ ಈಕೆ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಕೂಡ ಮಾಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


