ರಾಜ್ಯ

ನಿಷೇಧಿತ ಅರಣ್ಯ ಪ್ರದೇಶದಲ್ಲಿ ವಿದೇಶಿಯರ ಹೊಸ ವರ್ಷಾಚರಣೆ: 5 ದಿನಗಳ ಮೋಜು ಮಸ್ತಿ?

ಡಿಸೆಂಬರ್ 31 ರಿಂದ ಜನವರಿ 4 ನೇ ತಾರೀಖಿನವರೆಗೆ ಸುಮಾರು 150 ಮಂದಿ ವಿದೇಶಿಯರು ಕೊಪ್ಪಳದ ಗಂಗಾವತಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟು ...

ನಿಷೇಧಿತ ಅರಣ್ಯ ಪ್ರದೇಶದಲ್ಲಿ ವಿದೇಶಿಯರ ಹೊಸ ವರ್ಷಾಚರಣೆ: 5 ದಿನಗಳ ಮೋಜು ಮಸ್ತಿ?
ಹೊಸ ವರ್ಷಾಚರಣೆ ವೇಳೆ ಗುಂಪು ಗೂಡಿದ್ದ ವಿದೇಶಿ ಪ್ರವಾಸಿಗರು
Published On :

ಕೊಪ್ಪಳ: ಡಿಸೆಂಬರ್ 31 ರಿಂದ ಜನವರಿ 4 ನೇ ತಾರೀಖಿನವರೆಗೆ  ಸುಮಾರು 150 ಮಂದಿ ವಿದೇಶಿಯರು ಕೊಪ್ಪಳದ ಗಂಗಾವತಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟು ಹೊಸ ವರ್ಷಾಚರಣೆ ಆಚರಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಅಹೋಗ್ಲಿ ಮತ್ತು ಚಿಕ್ಬೆನಕಲ್ ಗ್ರಾಮದ ನಡುವಿರುವ ಮೀಸಲು ಅರಣ್ಯ. ಪ್ರದೇಶದಲ್ಲಿ ಹೊಸ ವರ್ಷಾಚರಣೆ ನಡೆಸಲಾಗಿದೆ. ಬೆಂಗಳೂರು ಮೂಲದ ರೆಸಾರ್ಟ್ ಮಾಲೀಕರೊಬ್ಬರು ವಿರಾಪಾಪುರ್ ಗಡ್ಡಿ ತಾಲೂಕಿನ ದ್ವೀಪದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಹಂಪಿಗೆ ಬರುವ ವಿದೇಶಿ ಪ್ರವಾಸಿಗರು ಈ ದ್ವೀಪಕ್ಕೆ ಭೇಟಿ ನೀಡುವುದು ಸಾಮಾನ್ಯವಾಗಿದೆ.

ಈ ದ್ವೀಪದಲ್ಲಿದ್ದ ಅನಧಿಕೃತ ರೆಸಾರ್ಟ್ ಗಳನ್ನು ತೆರವುಗೊಳಿಸಲಾಗುತ್ತಿದೆ. ಈ ಜಾಗಕ್ಕೆ ತೆರಳಲು ತಾತ್ಕಾಲಿಕ ರಸ್ತೆ  ನಿರ್ಮಿಸಲಾಗಿದೆ. ನಿಷೇಧವಿದ್ದರೂ ಐದು ದಿನಗಳ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾದಕ ವಸ್ತು ಮತ್ತು ಮಧ್ಯವನ್ನು ಉಪಯೋಗಿಸಲಾಗಿದೆ.

ಪಾರ್ಟಿ ಆಯೋಜಿಸಿದ್ದ ಸ್ಥಳದಲ್ಲಿ ರಾತ್ರಿ ವೇಳೆ  ಟೆಂಟ್ ಗಳನ್ನು ಹಾಕಿ ದೀಪಗಳನ್ನ ಬಳಸಲಾಗುತಿತ್ತು ಎಂದು ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿ ಯಾವುದೇ ಅನಧಿಕೃತ ಸಂಭ್ರಮಾಚರಣೆ ನಡೆದಿಲ್ಲ, ಆ ಸ್ಥಳದಲ್ಲಿ ಯಾವುದೇ ವಿದೇಶಿ ಪ್ರವಾಸಿಗರು ಇರಲಿಲ್ಲ ಎಂದು ಡಿವೈಎಸ್ ಪಿ ಎಸ್ ಎಂ ಸಂಡಿಗವಾಡ್ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಯಾವುದೇ ಕಾರ್ಯಕ್ರಮ ಪಾರ್ಟಿ ಆಯೋಜಿಸಲು ಅವಕಾಶವಿಲ್ಲ, ಆಗೋಳಿ ಮತ್ತು ಚಿಕ್ಬೆನಕಲ್ ಗ್ರಾಮಗಳ ಬೆಟ್ಟಿ ಪ್ರದೇಶದಲ್ಲಿದ್ದ ವಿದೇಶಿ ಪ್ರವಾಸಿಗರನ್ನು ತೆರವುಗೊಳಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಗೋವಿಂದರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.