ರಾಜ್ಯ

ಚಿಕ್ಕಮಗಳೂರಿನಲ್ಲಿ 2 ಕಡವೆ ಬೇಟೆ: ಶಾರ್ಪ್ ಶೂಟರ್ ಸೇರಿ 11 ಮಂದಿ ಬಂಧನ

ಹೊಸ ವರ್ಷಾಚರಣೆಗೆಂದು ಚಿಕ್ಕಮಗಳೂರಿನ ತರಿಕೇರೆ ತಾಲೂಕಿನ ಬೆತ್ತಿಚೌಕಕ್ಕೆ ಬಂದಿದ್ದ ಪ್ರವಾಸಿಗರ ತಂಡವೊಂದು ತಡ ರಾತ್ರಿ ಬೇಟೆಯಾಡಿ 2 ಕಡವೆಗಳನ್ನು...

ಚಿಕ್ಕಮಗಳೂರಿನಲ್ಲಿ 2 ಕಡವೆ ಬೇಟೆ: ಶಾರ್ಪ್ ಶೂಟರ್ ಸೇರಿ 11 ಮಂದಿ ಬಂಧನ
ಚಿಕ್ಕಮಗಳೂರಿನಲ್ಲಿ 2 ಕಡವೆ ಬೇಟೆ: ಶಾರ್ಪ್ ಶೂಟರ್ ಸೇರಿ 11 ಮಂದಿ ಬಂಧನ
Published On :
ಚಿಕ್ಕಮಗಳೂರು: ಹೊಸ ವರ್ಷಾಚರಣೆಗೆಂದು ಚಿಕ್ಕಮಗಳೂರಿನ ತರಿಕೇರೆ ತಾಲೂಕಿನ ಬೆತ್ತಿಚೌಕಕ್ಕೆ ಬಂದಿದ್ದ ಪ್ರವಾಸಿಗರ ತಂಡವೊಂದು ತಡ ರಾತ್ರಿ ಬೇಟೆಯಾಡಿ 2 ಕಡವೆಗಳನ್ನು ಹತ್ಯೆ ಮಾಡಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. 
ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ನೌಕರರಾಗಿರುವ 12 ಮಂದಿ ತಂಡ ಕಳೆದ ರಾತ್ರಿ 2 ಗಂಟೆ ಸುಮಾರಿನಲ್ಲಿ ಬೆತ್ತಿಚೌಕದಲ್ಲಿ ಬೇಟೆಗೆ ತೆರಳಿ 1 ಗಂಡು ಮತ್ತು 1 ಹೆಣ್ಣು ಕಡವೆಯನ್ನು ಬೇಟೆಯಾಡಿದ್ದಾರೆ. ಬೇಟೆಯಾಡಿ ಮರಳಿ ಬರುವಾಗ ಅರಣ್ಯಾಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ ಪ್ರವಾಸಿ ತಂಡಕ್ಕೆ ಸಹಾಯಕನಾಗಿದ್ದ ಸ್ಥಳೀಯನಾದ ರಫೀಕ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ. 
ಇದರಲ್ಲಿ ಚಿನ್ನದ ಪದಕ ವಿಜೇತ ಶಾರ್ಪ್ ಶೂಟರ್ 29 ವರ್ಷದ ಸಮೀರ್ ಸಹ ಇದ್ದು 11 ಮಂದಿಯನ್ನು ತರಿಕೇರೆ ಜೆಎಂಎಫ್ಸಿ ಕೋರ್ಟ್ ನ ನ್ಯಾಯಾಧೀಶರ ಮನೆಗೆ ಕರೆದುಕೊಂಡು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು 11 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. 
ಇನ್ನು ತಲೆ ಮರೆಸಿಕೊಂಡಿರುವ ರಫೀಕ್ ಎಂಬಾತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.