ಶಾಸಕ ಪಿಳ್ಳಮುನಿಶಾಮಪ್ಪ ಅಂಗರಕ್ಷಕನ ಸರ್ವೀಸ್ ರಿವಾಲ್ವರ್ ನಾಪತ್ತೆ
ತಮ್ಮ ಸರ್ವೀಸ್ ರಿವಾಲ್ವರ್ ನಾಪತ್ತೆಯಾಗಿದೆ ಎಂದು ದೇವನಹಳ್ಳಿ ಶಾಸಕ ಪಿಳ್ಳ ಮುನಿಶಾಮಪ್ಪ ಅವರ ಅಂಗರಕ್ಷಕ ನರಸಿಂಹ ಮೂರ್ತಿ ಯಲಹಂಕ ಠಾಣೆಯಲ್ಲಿ ದೂರು ...

ಬೆಂಗಳೂರು: ತಮ್ಮ ಸರ್ವೀಸ್ ರಿವಾಲ್ವರ್ ನಾಪತ್ತೆಯಾಗಿದೆ ಎಂದು ದೇವನಹಳ್ಳಿ ಶಾಸಕ ಪಿಳ್ಳ ಮುನಿಶಾಮಪ್ಪ ಅವರ ಅಂಗರಕ್ಷಕ ನರಸಿಂಹ ಮೂರ್ತಿ ಯಲಹಂಕ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನರಸಿಂಹ ಮೂರ್ತಿ ಅವರನ್ನು ಒಂದು ವರ್ಷದ ಹಿಂದೆ ಪಿಳ್ಳ ಮುನಿಶಾಮಪ್ಪ ಅವರ ಗನ್ ಮ್ಯಾನ್ ಆಗಿ ನೇಮಿಸಲಾಗಿತ್ತು. ಪಿಳ್ಳ ಮುನಿಶಾಮಪ್ಪ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜಿನಾಮೆ ಹಿಂಪಡೆಯುವಂತೆ ಅವರ ಮನವೊಲಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ .ಡಿ ದೇವೇಗೌಡ ಅವರು ಶಾಸಕರ ಮನೆಗೆ ಬಂದಿದ್ದರು. ಈ ವೇಳೆ ಮನೆಯ ಸಮೀಪ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಅವರಲ್ಲೇ ಯಾರೋ ಪಿಸ್ತೂಲು ತೆಗೆದುಕೊಂಡಿರುವ ಸಾಧ್ಯತೆ ಇದೆ ಎಂದು ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಆ ನಂತರ ಶಾಸಕರು ದೇವೇಗೌಡ ಅವರ ಮನೆಗೆ ತೆರಳಿದರು. ನಾನೂ ಕೂಡ ಅವರ ಜೊತೆಯಲ್ಲೇ ತೆರಳಿದ್ದೆ. ಅಲ್ಲಿ ಕಾರ್ಯಕರ್ತರು ಹಾಗೂ ಸ್ಥಳೀಯರು ಇದ್ದರು ಎಂದು ದೂರಿನಲ್ಲಿ ಹೇಳಿದ್ದಾರೆ.
ನಾಲ್ಕು ದಿನಗಳ ಹಿಂದೆಯೇ ಪಿಸ್ತೂಲ್ ಕಳುವಾಗಿದ್ದರೂ ಸುಮ್ಮನೇ ಇದ್ದ ನರಸಿಂಹ ಮೂರ್ತಿ ಬಹಳ ಹಿಂದೆಯೇ ಪಿಸ್ತೂಲ್ ಕಳೆದು ಕೊಂಡಿರಬಹುದು. 11 ವರ್ಷಗಳ ಹಿಂದೆ ಶಸ್ತ್ರಾಸ್ತ್ರ ಕದಿದ್ದ ಸಿಎಆರ್ ಪೇದೆ ಹಾಗೂ ಶಾಸಕ ಸಿ.ಆರ್ ಮನೋಹರ್ ಅವರ ಗನ್ ಮ್ಯಾನ್ ಆಗಿದ್ದ ಪುರುಷೋತ್ತಮ್ ಅವರನ್ನು ಬಂಧಿಸಿದ್ದ ಹಿನ್ನೆಲೆಯಲ್ಲಿ ನರಸಿಂಹ ಮೂರ್ತಿ ದೂರು ದಾಖಲಿಸಿರಬಹುದು ಎಂದು ತನಿಖಾಧಿಕಾರಿಗಳು ಅನುಮಾನ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


