ರಾಜ್ಯ

ಕೊಟ್ಟೂರು ಜಾತ್ರೆ ಅನಾಹುತ: ಪಿಡಬ್ಲ್ಯುಡಿ, ದತ್ತಿ ಇಲಾಖೆ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಕೇಸು

ಕೊತ್ತೂರಿನಲ್ಲಿ ಗುರು ಕೊಟ್ಟೂರೇಶ್ವರ ಜಾತ್ರೆ ಸಂದರ್ಭದಲ್ಲಿ ರಥ ಉರುಳಿಬಿದ್ದು 11 ಜನರಿಗೆ ಗಾಯವಾದ...

ಕೊಟ್ಟೂರು ಜಾತ್ರೆ ಅನಾಹುತ: ಪಿಡಬ್ಲ್ಯುಡಿ, ದತ್ತಿ ಇಲಾಖೆ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಕೇಸು
ಬಳ್ಳಾರಿಯ ಕೊಟ್ಟೂರು ಪಟ್ಟಣದಲ್ಲಿ ಉರುಳಿಬಿದ್ದ ರಥವನ್ನು ಕ್ರೇನ್ ಮೂಲಕ ನಿನ್ನೆ ಎತ್ತಲಾಯಿತು.
Published On :
ಬಳ್ಳಾರಿ: ಕೊತ್ತೂರಿನಲ್ಲಿ ಗುರು ಕೊಟ್ಟೂರೇಶ್ವರ ಜಾತ್ರೆ ಸಂದರ್ಭದಲ್ಲಿ ರಥ ಉರುಳಿಬಿದ್ದು 11 ಜನರಿಗೆ ಗಾಯವಾದ ಘಟನೆಗೆ ಸಂಬಂಧಪಟ್ಟಂತೆ ಲೋಕೋಪಯೋ ಗಿ ಇಲಾಖೆ ಸಹಾಯಕ ಕಾರ್ಯಕಾರಿ ಎಂಜಿನಿಯರ್ ತಿಮ್ಮಪ್ಪ,ದತ್ತಿ ಇಲಾಖೆ ಸಹಾಯಕ ಆಯುಕ್ತ ಮಹೇಶ್, ದೇವಸ್ತಾನ ಸಮಿತಿಯ ಕಾರ್ಯಕಾರಿ ಅಧಿಕಾರಿ ಹಾಲಪ್ಪ ಅವರ ವಿರುದ್ಧ ನಿರ್ಲಕ್ಷ್ಯದ ಕೇಸು ದಾಖಲಾಗಿದೆ. 
65 ಅಡಿ ಎತ್ತರದ ಮರದ ದೇವಸ್ಥಾನದ ರಥವನ್ನು ವಾರ್ಷಿಕ ಜಾತ್ರೆ ಪ್ರಯುಕ್ತ ಹೊರತೆಗೆಯಲಾಗಿತ್ತು. ಚೆಲ್ಲ ಆಂಜನಪ್ಪ ಎಂಬುವವರು ಸಲ್ಲಿಸಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಥದ ಮುಂಬಾಗದ ಬಲಚಕ್ರ ಉರುಳಿ ಬಿದ್ದು ಅಲ್ಲಿ ಸೇರಿದ್ದ ಭಕ್ತರು ಗಾಯಗೊಂಡಿದ್ದಾರೆ.
ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು ಘಟನೆಯ ತನಿಖೆ ನಡೆಸಲಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.