ರಾಜ್ಯ

ಫೆಮಿನಾ ಮಿಸ್ ಇಂಡಿಯಾ ರಾಜ್ಯ ಮಟ್ಟದ ಆಯ್ಕೆ ಸುತ್ತು 26ರಂದು

ಫೆಮಿನಾ ಮಿಸ್ ಇಂಡಿಯಾ 2017 ಅಂಗವಾಗಿ ಕರ್ನಾಟಕದಲ್ಲಿ ಫೆ.26ರಂದು ಸ್ಪರ್ಧೆಗೆ ರಾಜ್ಯಮಟ್ಟದ ಆಯ್ಕೆ ನಡೆಯಲಿದೆ.

ಫೆಮಿನಾ ಮಿಸ್ ಇಂಡಿಯಾ ರಾಜ್ಯ ಮಟ್ಟದ ಆಯ್ಕೆ ಸುತ್ತು 26ರಂದು
ಫೆಮಿನಾ ಮಿಸ್ ಇಂಡಿಯಾ 2017
Published On :
ಬೆಂಗಳೂರು: ಬಹು ನಿರೀಕ್ಷಿತ ಎಫ್‍ಬಿಬಿ ಕಲರ್ಸ್ ಫೆಮಿನಾ ಮಿಸ್ ಇಂಡಿಯಾ 2017 ಆರಂಭಕ್ಕೆ ಸಜ್ಜಾಗಿದೆ. 54ನೇ ಆವೃತ್ತಿಯಲ್ಲಿ ದೇಶವನ್ನು ಪ್ರತಿನಿಧಿಸಬಲ್ಲ ಅತ್ಯಂತ ಸುಂದರ ಯುವತಿಯನ್ನು ಆಯ್ಕೆ ಮಾಡಲಾಗುತ್ತಿದ್ದು, ವಿಜೇತರು ಮಿಸ್ ವರ್ಲ್ಡ್ 2017ರಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದರ ಅಂಗವಾಗಿ ಕರ್ನಾಟಕದಲ್ಲಿ ಫೆ.26ರಂದು ಸ್ಪರ್ಧೆಗೆ ರಾಜ್ಯಮಟ್ಟದ ಆಯ್ಕೆ ನಡೆಯಲಿದೆ. ಮಹದೇವಪುರದ ಫೊನಿಕ್ಸ್ ಮಾರ್ಕೆಟ್ ಸಿಟಿಯಲ್ಲಿನ ಎಫ್‍ಬಿಬಿ/ಬಿಗ್‍ಬಜಾರ್‍ನಲ್ಲಿ ಆಯ್ಕೆ ನಡೆಯಲಿದೆ. 
ಭಾರತದ 30 ರಾಜ್ಯದಲ್ಲೂ ಆಯ್ಕೆ ನಡೆಯಲಿದ್ದು, ಅಲ್ಲಿನ 30 ವಿಜೇತರು ಮುಂಬೈನಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆಯುತ್ತಾರೆ. ಕರ್ನಾಟಕದ 3 ಸ್ಪರ್ಧಿಗಳು ಬೆಂಗಳೂರಿನಲ್ಲಿ ನಡೆಯುವ ಸ್ಟೇಟ್ ಜೋನಲ್ ಕ್ರೌನಿಂಗ್ ಕಾರ್ಯಕ್ರಮದಲ್ಲಿ ಗೋಲ್ಡನ್ ಟಿಕೆಟ್ ಗಳಿಸಲಿದ್ದಾರೆ. ಒಟ್ಟು 5 ರಾಜ್ಯಗಳ ಒಂದೊಂದು ವಲಯ ರಚಿಸಲಾಗಿದ್ದು ಅಂತಿಮವಾಗಿ ಪ್ರತಿ 5 ರಾಜ್ಯದ ಒಬ್ಬರು ಮುಂಬೈನಲ್ಲಿ ಜೂನ್‍ನಲ್ಲಿ ನಡೆಯುವ ಗ್ರ್ಯಾಂಡ್ ಫಿನಾಲೆಯಲ್ಲಿ ಅವಕಾಶ ಗಳಿಸಲಿದ್ದಾರೆ. 
ಒಂದು ದಿನಪೂರ್ತಿ ನಡೆಯುವ ಆಡಿಷನ್‍ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅತ್ಯದ್ಭುತ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ. ಇದೇ ಮೊದಲ ಭಾರಿಗೆ ಸ್ಪರ್ಧಿಗಳಿಗೆ ಮಾರ್ಗದರ್ಶಕರನ್ನು ನೀಡಲಾಗುತ್ತಿದೆ. ದಕ್ಷಿಣ ವಲಯದ ಮಾರ್ಗದರ್ಶಕರಾಗಿ ಮಿಸ್ ವರ್ಲ್ಡ್ ರನ್ನರ್ ಅಪ್ ಪಾರ್ವತಿ ಓಮನ್‍ಕುಟ್ಟನ್ ಇರಲಿದ್ದಾರೆ. 
ಎಫ್‍ಬಿಬಿಕಲರ್ಸ್ ಫೆಮಿನಾ ಮಿಸ್ ಇಂಡಿಯಾ 2017ಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಗಳು:
  • ಎತ್ತರ 5.5 ಮತ್ತು ಅದಕ್ಕಿಂತ ಮೇಲ್ಪಟ್ಟು
  • ವಯಸ್ಸು: 18-25( ಡಿ.31,2017ರವರೆಗೆ)
  • ರಾಷ್ಟ್ರೀಯತೆ: ಭಾರತೀಯ(ಭಾರತೀಯ ಪಾಸ್‍ಪೋರ್ಟ್ ಹೊಂದಿರಬೇಕು) ಒಸಿಐ ಕಾರ್ಡ್ ಹೊಂದಿರಬೇಕು (ಈ ಕಾರ್ಡ್ ಹೊಂದಿರುವವರು ಮಿಸ್ ಇಂಡಿಯಾ ಟೈಟಲ್ ಗೆಲ್ಲಲ್ಲು ಸಾಧ್ಯವಿಲ್ಲ. ಕೇವಲ ರನ್ನರ್ ಅಪ್ ಆಗಬಹುದು)
  • ಪ್ರಸ್ತುತ ರಾಜ್ಯದ ನಿವಾಸಿಯಾಗಿರಬೇಕು ಅಥವಾ/ಆ ರಾಜ್ಯದಲ್ಲಿ ಹುಟ್ಟಿರಬೇಕು/ಆಕೆಯ ಪಾಲಕರು ರಾಜ್ಯದಲ್ಲಿರಬೇಕು ಅಥವಾ ಆಕೆ 12ನೇ ತರಗತಿವರೆಗಿನ ಶಿಕ್ಷಣವನ್ನು ಆ ರಾಜ್ಯದಲ್ಲಿ ಮುಗಿಸಿರಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.