ತುಮಕೂರು: ಮೂಹೂರ್ತಕ್ಕೆ ಸಿದ್ದವಾಗುತ್ತಿದ್ದ ಮಧುಮಗ ಕಲ್ಯಾಣ ಮಂಟಪದಲ್ಲಿ ಸಾವು
ಮೂಹೂರ್ಥಕ್ಕೆ ಕೆಲವೇ ಸಮಯ ಬಾಕಿಯಿತ್ತು, ವಧುವಿಗೆ ತಾಳಿ ಕಟ್ಟಲು ವರ ಸಿದ್ಧತೆ ನಡೆಸಿಕೊಳ್ಳುತ್ತಿದ್ದ. ಈ ವೇಳೆಗಾಗಿಯೇ ಹೊಂಚು ಹಾಕಿ ಕುಳಿತಿದ್ದ ...

ತುಮಕೂರು: ಮೂಹೂರ್ಥಕ್ಕೆ ಕೆಲವೇ ಸಮಯ ಬಾಕಿಯಿತ್ತು ,ವಧುವಿಗೆ ತಾಳಿ ಕಟ್ಟಲು ವರ ಸಿದ್ಧತೆ ನಡೆಸಿಕೊಳ್ಳುತ್ತಿದ್ದ. ಈ ವೇಳೆಗಾಗಿಯೇ ಹೊಂಚು ಹಾಕಿ ಕುಳಿತಿದ್ದ ಜವರಾಯ ವರನ ಪ್ರಾಣಪಕ್ಷಿಯನ್ನ ಹೊತ್ತೊಯ್ದಿದ್ದಾನೆ.
ಹೊಸಬಾಳಿನ ಹೊಸ್ತಿಲು ತುಳಿಯಲು ರೆಡಿಯಾಗುತ್ತಿದ್ದ ವರನಿಗೆ ಹೃದಯಾಘಾತವಾಗಿ ಕಲ್ಯಾಣ ಮಂಟಪದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ವಸಂತ್ ಕುಮಾರ್ ಮೃತ ದುರ್ದೈವಿ.
ತುಮಕೂರಿನ ಗವಿರಂಗ ಕಲ್ಯಾಣ ಮಂಟಪದಲ್ಲಿ ದುರಂತ ನಡೆದಿದೆ. ವಸಂತ್‌ಕುಮಾರ್ ಎಂ.ಟೆಕ್ ಪದವೀಧರರಾಗಿ ಉನ್ನತ ಹುದ್ದೆಯಲ್ಲಿದ್ದು, ಎಂ.ಟೆಕ್ ಪದವೀಧರೆಯೊಂದಿಗೆ ವಿವಾಹ ನೆರವೇರಬೇಕಿತ್ತು. ಶನಿವಾರ ಸಂಜೆ ಆರತಕ್ಷತೆ ಸೇರಿದಂತೆ, ವರಪೂಜೆ ಸಂಪ್ರದಾಯಗಳು ನೆರವೇರಿದ್ದವು. ವರನ ಸಾವಿನಿಂದ ಕಲ್ಯಾಣ ಮಂಟಪದಲ್ಲಿ ಸ್ಮಶಾನ ಮೌನ ಆವರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


