ಮೈಸೂರು ಮೃಗಾಲಯ ಮತ್ತೆ ಸಾರ್ವಜನಿಕ ವೀಕ್ಷಣೆಗೆ ಮುಕ್ತ
ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಯಲಯವನ್ನು ಫೆಬ್ರವರಿ 3ರಂದು ಶುಕ್ರವಾರ ಮತ್ತೆ ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಯಿತು.

ಮೈಸೂರು: ಮೈಸೂರಿನ 124 ವರ್ಷ ಹಳೇಯದಾದ ಶ್ರೀ ಜಯಚಾಮರಾಜೇಂದ್ರ ಮೃಗಾಯಲಯವನ್ನು ಫೆಬ್ರವರಿ 3ರಂದು ಶುಕ್ರವಾರ ಮತ್ತೆ ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಯಿತು. ಹಕ್ಕಿ ಜ್ವರದಿಂದ ಮೃಗಾಲಯದ ಪಕ್ಷಿಗಳು ಸಾವಿಗೀಡಾದ ಹಿನ್ನಲೆಯಲ್ಲಿ ಮೃಗಾಲಯವನ್ನು ಜನವರಿ 4ರಿಂದ ಸುಮಾರು ಒಂದು ತಿಂಗಳು ಮುಚ್ಚಲಾಗಿತ್ತು.
ಶುಕ್ರವಾರ ಬೆಳಿಗ್ಗೆ 8.30ಕ್ಕೆ ಮೃಗಾಲಯದ ಗೇಟ್ ಗಳನ್ನು ತೆರೆದಾಗ ನೂರಾರು ಪ್ರವಾಸಿಗರು ಭೇಟಿ ನೀಡಲಾರಂಭಿಸಿದರು. ಸುಮಾರು 4,500 ಜನ ನಿನ್ನ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಇದಕ್ಕೂ ಮುಂಚೆ ಮೃಗಾಲಯ ಸಿಬ್ಬಂದಿಗಳು ದ್ವಾರದಲ್ಲಿ ಪೂಜೆ ಮಾಡಿ ಸಿಬ್ಬಂದಿ ಮತ್ತು ಪ್ರವಾಸಿಗರಿಗೆ ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೃಗಾಲಯದ ಕಾರ್ಯಕಾರಿ ನಿರ್ದೇಶಕರಾದ ಕೆ ಕಮಲಾ ಕರಿಕಾಳನ್ ಮಾತನಾಡಿ, ಮೃಗಾಲಯವು ಈಗ ಹಕ್ಕಿ ಜ್ವರದ ಭೀತಿಯಿಂದ ಮುಕ್ತವಾಗಿದೆ ಎಂದರು. ಕಳೆದ ಒಂದು ತಿಂಗಳಲ್ಲಿ ತೋಳ, ಜಿಂಕೆ ಮತ್ತು ಕಾಡು ನಾಯಿಗಳು ಮರಿಗಳಿಗೆ ಜನ್ಮ ನೀಡಿವೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


