ಮಂಡ್ಯ: ಬಲಮುರಿ ಜಲಪಾತದಲ್ಲಿ ಈಜಲು ತೆರಳಿದ್ದ ಯುವಕ ಸಾವು
ಹೊಸವರ್ಷಾಚರಣೆಗೆ ಬಲಮುರಿ ಜಲಪಾತಕ್ಕೆ ವಿಹಾರ ಬಂದಿದ್ದ ಯುವಕನೊಬ್ಬ ನೀರಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ.

Published On :
ಮಂಡ್ಯ: ಹೊಸವರ್ಷಾಚರಣೆಗೆ ಬಲಮುರಿ ಜಲಪಾತಕ್ಕೆ ವಿಹಾರ ಬಂದಿದ್ದ ಯುವಕನೊಬ್ಬ ನೀರಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ.
ಮೃತನನ್ನು ಮಹಮದ್ ಸಾಹಿಲ್ (19) ಎಂದು ಗುರುತಿಸಲಾಗಿದ್ದು ಕೇರಲದವನಾದ ಈತ ಮಂಗಲೂರಿನ ಶ್ರೀನಿವಾಸ್ ಕಾಲೇಜಿನಲ್ಲಿ ಬಿ.ಫಾರ್ಮ್ ಓದುತ್ತಿದ್ದನೆನ್ನಲಾಗಿದೆ.
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮಹಮದ್ ತನ್ನ 15 ಜನ ಸ್ನೇಹಿತರೊಂದಿಗೆ ಇಂದು ಬಲಮುರಿಗೆ ಬಂದಿದ್ದನು. ಹೊಸ ವರ್ಷದ ಸಂಭ್ರಮದ ವೇಳೆ ಜಲಪಾತದ ನೀರಿನ ಸೆಳವಿಗೆ ಸಿಕ್ಕು ಸಾಯುವವರ ಸಂಖ್ಯೆ ಹೆಚ್ಚಾಗಿರಲಿದೆ ಎನ್ನುವ ಕಾರಣಕ್ಕೆ ಇಂದು ಹಾಗೂ ಣಾಳೆ ಜಲಪಾತ ಪ್ರವೇಶ ನಿಷೇಧ ಮಾಡಲಾಗಿತ್ತು. ಆದರೆ ನಿಷೇಧದ ನಡುವೆಯೂ ಪೋಲೀಸರ ಕಣ್ತಪ್ಪಿಸಿ ಈ ಯುವಕರು ನೀರಿಗಿಳಿದಿದ್ದರು. ಹಾಗೆ ನೀರಿಗಿಳಿದಿದ್ದಾಗ ಮಹಮದ್ ಸೆಳವಿಗೆ ಸಿಕ್ಕು ಸಾವನ್ನಪ್ಪಿದ್ದಾನೆ.
ಇನ್ನು ತಂದದ ಇನ್ನಿತರರ ಪತ್ತೆಗಾಗಿ ಪೋಲೀಸ್ ಕಾರ್ಯಾಚರಣೆ ಮುಂದುವರಿದಿದೆ. ಪ್ರಕರಣ ಸಂಬಂಧ ಕೆ.ಆರ್.ಸಾಗರ ಪೊಲೀಸ್ ಠಾಣೆಯಾಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


