ರಾಜ್ಯ

ಮಂಗಳೂರು ನಗರದಲ್ಲಿ ದೇಶದ ಮೊದಲ ಸ್ಟಾರ್ಟಪ್ ಸೆಂಟರ್

ಯುವ ಎಂಜಿನಿಯರ್ ಗಳಿಗೆ ಹೊಸ ಐಟಿ ಉದ್ದಿಮೆಯನ್ನು ಆರಂಭಿಸಲು ಸಹಾಯಕವಾಗುವ ಬಹುನಿರೀಕ್ಷಿತ ದೇಶದ ಮೊದಲ ಸ್ಟಾರ್ಟಪ್ ಇನ್'ಕ್ಯುಬೇಶನ್ ಕೇಂದ್ರವನ್ನು ಶುಕ್ರವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು...

ಮಂಗಳೂರು ನಗರದಲ್ಲಿ ದೇಶದ ಮೊದಲ ಸ್ಟಾರ್ಟಪ್ ಸೆಂಟರ್
ಸ್ಟಾರ್ಟಪ್ ಇನ್'ಕ್ಯುಬೇಶನ್ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
Published On :
ಮಂಗಳೂರು: ಯುವ ಎಂಜಿನಿಯರ್ ಗಳಿಗೆ ಹೊಸ ಐಟಿ ಉದ್ದಿಮೆಯನ್ನು ಆರಂಭಿಸಲು ಸಹಾಯಕವಾಗುವ ಬಹುನಿರೀಕ್ಷಿತ ದೇಶದ ಮೊದಲ ಸ್ಟಾರ್ಟಪ್ ಇನ್'ಕ್ಯುಬೇಶನ್ ಕೇಂದ್ರವನ್ನು ಶುಕ್ರವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಿದರು. 
ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದಲೇ ರೂ.1.50 ಕೋಟಿ ಮೊತ್ತವನ್ನು ಇದಕ್ಕಾಗಿ ವಾಣಿಜ್ಯ ಸಚಿವೆಯಾಗಿದ್ದಾಗ ನಿರ್ಮಲಾ ಸೀತಾರಾಮನ್ ಅವರು ಬಿಡುಗಡೆಗೊಳಿಸಿದ್ದರು. 11 ತಿಂಗಳಲ್ಲಿ 60 ಯುವ ಎಂಜಿನಿಯರ್ ಗಳಿಗೆ ಉದ್ದಮೆ ಸ್ಥಾಪಿಸಲು ತಮ್ಮ ಯೋಜನೆಯನ್ನು ಪಕ್ಷಗೊಳಿಸುವ ಕೇಂದ್ರವಾಗಿ ಇದನ್ನು ರೂಪುಗೊಳಿಸಲಾಗಿದೆ. 
ಸಮಾರಂಭದಲ್ಲಿ ಮಾತನಾಡಿರುವ ನಿರ್ಮಲಾ ಸೀತಾರಾಮನ್ ಅವರು, ಸಣ್ಣ ಉದ್ದಿಮೆಯಿಂದ ತೊಡಗಿ ದೊಡ್ಡ ಕೈಗಾರಿಕೆ ಸ್ಥಾಪನೆಯವರೆಗೆ ಸ್ಟಾರ್ಟಪ್ ನೆರವಾಗುತ್ತಿದ್ದು, ಬೆಂಗಳೂರಿಗೆ ಪರ್ಯಾಯವಾಗಿ ಮಂಗಳೂರನ್ನು ಐಟಿ ವಲಯವಾಗಿ ಬೆಳೆಸಲು ಈ ಕೇಂದ್ರ ಪ್ರಯೋಜನಕಾರಿಯಾಗಲಿದೆ. ಸಾಮಾನ್ಯರಿಗೆ ಸುಲಭದ ಬಾಡಿಗೆ ದರದಲ್ಲಿ ಇದರ ಸೇವೆ ಲಭ್ಯವಾಗಲಿದ್ದು. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. 
100 ಶಾಲೆಗಳಲ್ಲಿ ಟಿಂಕರಿಂಗ್ ಲ್ಯಾಬ್
ಇದೂವರೆಗೆ ರಾಜಧಾನಿ ದೆಹಲಿಗೆ ಸೀಮಿತವಾಗಿದ್ದ ಅಟಲ್ ಟಿಂಕರಿಂಗ್ ಕೇಂದ್ರಗಳನ್ನು ಕರ್ನಾಟಕಕ್ಕೆ ತರಲಾಗಿದೆ. ಕರಾವಳಿಯ 3 ಜಿಲ್ಲೆಗಳ 100 ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ಇದೇ ವೇಳೆ ಸೀತಾರಾಮನ್ ಅವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.