ರಾಜ್ಯ

ಇಸ್ರೊದಿಂದ ಜನವರಿ 10ರಂದು 31 ಉಪಗ್ರಹಗಳ ಉಡಾವಣೆ

ಜನವರಿ 10ರಂದು ಭೂಪರಿವೀಕ್ಷಣ ಉಪಗ್ರಹ 'ಕಾರ್ಟೊಸ್ಯಾಟ್' ಸೇರಿದಂತೆ 31 ಉಪ ಗ್ರಹಗಳನ್ನು ಭಾರತ ಉಡಾವಣೆ ಮಾಡಲಿದೆ ಎಂದು...

ಇಸ್ರೊದಿಂದ ಜನವರಿ 10ರಂದು 31 ಉಪಗ್ರಹಗಳ ಉಡಾವಣೆ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಜನವರಿ 10ರಂದು ಭೂಪರಿವೀಕ್ಷಣ ಉಪಗ್ರಹ 'ಕಾರ್ಟೊಸ್ಯಾಟ್' ಸೇರಿದಂತೆ 31 ಉಪ ಗ್ರಹಗಳನ್ನು ಭಾರತ ಉಡಾವಣೆ ಮಾಡಲಿದೆ ಎಂದು ಶನಿವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯ ಅಧಿಕಾರಿಗಳು ತಿಳಿಸಿದ್ದಾರೆ. 
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜನವರಿ 10ರಂದು ಬೆಳಗ್ಗೆ 930ಕ್ಕೆ ಪಿಎಸ್‌ಎಲ್‌ವಿ -ಸಿ40 ರಾಕೆಟ್, ಕಾರ್ಟೊ ಸ್ಯಾಟ್–3ರ ಜತೆ ಇನ್ನೂ 30 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ ಎಂದು ಇಸ್ರೊ ನಿರ್ದೇಶಕ ದೇವಿ ಪ್ರಸಾದ್ ಕಾರ್ನಿಕ್ ಅವರು ಐಎಎನ್ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇದೇ ವರ್ಷದ ಫೆಬ್ರುವರಿಯಲ್ಲಿ ಈ ಸರಣಿಯ ಮೊದಲ ಮತ್ತು ಜೂನ್‌ನಲ್ಲಿ ಈ ಸರಣಿಯ ಎರಡನೇ ಉಪಗ್ರಹವನ್ನು ಇಸ್ರೊ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತ್ತು.
ಆಗಸ್ಟ್‌ನಲ್ಲಿ ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯ 1ಎಚ್ (ಐಆರ್‌ಎನ್‌ಎಸ್‌ಎಸ್‌–1ಎಚ್) ಉಪಗ್ರಹವನ್ನು ಹೊತ್ತಿದ್ದ ಪಿಎಸ್‌ಎಲ್‌ವಿ–ಸಿ39 ಕಾರ್ಯಾಚರಣೆಯನ್ನು ಪೂರ್ಣಗೊಳಿಸುವಲ್ಲಿ ವಿಫಲವಾಗಿತ್ತು.
ರಾಕೆಟ್‌ನ ಮುಂಭಾಗದ ಉಷ್ಣ ಕವಚವು ತೆರೆದುಕೊಳ್ಳದೇ ಇದ್ದುದ್ದರಿಂದ, ಅದರೊಳಗಿದ್ದ ಉಪಗ್ರಹ ಹೊರಗೆ ಬರಲು ಸಾಧ್ಯವಾಗದೆ ಕಾರ್ಯಾಚರಣೆ ವಿಫಲವಾಗಿತ್ತು. ಆ ವೈಫಲ್ಯದ ನಂತರ ಇದೇ ಮೊದಲ ಬಾರಿ ಪಿಎಸ್‌ಎಲ್‌ವಿ ಯನ್ನು ಬಳಸಿಕೊಳ್ಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.